Monday, December 23, 2024

ಇದು ಸಿದ್ದರಾಮಯ್ಯ ಹಣನಾ? ಡಿಕೆಶಿ ಹಣನಾ? : ಕೆ.ಎಸ್ ಈಶ್ವರಪ್ಪ

ಬೆಂಗಳೂರು : ಐಟಿ ದಾಳಿ ವೇಳೆ ಕಾಂಗ್ರೆಸ್ ನಾಯಕಿಯ ಪತಿ ಮನೆಯಲ್ಲಿ ಬರೋಬ್ಬರಿ 42 ಕೋಟಿ ರೂಪಾಯಿ ಪತ್ತೆಯಾಗಿರುವ ಸಂಬಂಧ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಗುತ್ತಿಗೆದಾರರು ಮತ್ತು ಕಾಂಗ್ರೆಸ್​ನವ್ರು ಅಣ್ಣ ತಮ್ಮಂದಿರ ಹಾಗೆ ಎಂದು ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನವರಿಗೂ ಗುತ್ತಿಗೆದಾರರಿಗೂ ನೇರ ಸಂಬಂಧ ಇದೆ. ಕಳೆದ ಸಲ ನಮ್ಮ ಮೇಲೆ 40% ಆರೋಪವನ್ನು ದಾಖಲೆ ಇಲ್ಲದೇ ಮಾಡಿದ್ರು. ಆಗಲೇ ನಾವು ಇವರು ಕಾಂಗ್ರೆಸ್ ಏಜೆಂಟರು ಅಂದಿದ್ವಿ. ಈ ಹಣವನ್ನು ಕೇಂದ್ರದ ಎಐಸಿಸಿಗೆ ಕಳಿಸಿಕೊಡುವ ತಯಾರಿ ಆಗಿತ್ತು. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಪ ಮಾಡಿದ್ದಾರೆ.

ಇದು ಐಸಿಸಿಗೆ ಹೋಗಬೇಕಿದ್ದ ಹಣ

ಇದು ಐಸಿಸಿಗೆ ಹೋಗಬೇಕಿದ್ದ ಹಣ. ಈಗ ಸಿಕ್ಕಿರುವ 42 ಕೋಟಿ ಹಣದ ಬಗ್ಗೆ ತನಿಖೆ ಆಗಬೇಕು. ಆಗ ಇದು ಯಾರ ಹಣ ಅಂತ ಗೊತ್ತಾಗುತ್ತೆ. ಇದು ಸಿದ್ದರಾಮಯ್ಯ ಹಣನಾ? ಡಿಕೆಶಿ ಹಣನಾ? ಅಂತ ಗೊತ್ತಾಗುತ್ತೆ. ಈ ಹಣವನ್ನು ಎಐಸಿಸಿಗೆ ಕಳಿಸಲು ಸಂಗ್ರಹ ಮಾಡಲಾಗಿತ್ತು. ಪಂಚ ರಾಜ್ಯಗಳ ಚುನಾವಣೆಗೆ ಕಳಿಸಲು ಈ ಹಣ ಇಟ್ಕೊಂಡಿದ್ರು ಅಂತ ಹಲವರು ಹೇಳ್ತಾರೆ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES