Monday, December 23, 2024

ಡಿಕೆಶಿ ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ VS ವಿಪಕ್ಷ ನಾಯಕನನ್ನು ಹುಡುಕಿಕೊಡ್ತೀರಾ? : ಟ್ವೀಟ್ ವಾರ್

ಬೆಂಗಳೂರು : I.N.D.I.A (ಇಂಡಿಯಾ) ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಸಿಎಂ ಸ್ಟಾಲಿನ್ ಕಟ್ಟಪ್ಪಣೆಯ ಮೇರೆಗೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಸಂಬಂಧ ಬಿಜೆಪಿ, ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದೆ. ಕಾಂಗ್ರೆಸ್‌ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ತಮಿಳುನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್‌ ನಾಪತ್ತೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಲೇವಡಿ ಮಾಡಿದೆ.

ವಿಪಕ್ಷ ನಾಯಕನನ್ನು ಹುಡುಕಿಕೊಡ್ತೀರಾ?

ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್​​ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ. ನಿಮಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕಾಣಿಸಲಿಲ್ಲ ಎಂದರೆ ನಿಮ್ಮದೇ ಪಕ್ಷದ ಶಾಸಕ ಮುನಿರತ್ನರನ್ನು ಕೇಳಿ ನೋಡಿ, ಮಾಹಿತಿ ಸಿಗಬಹುದು. ನಿಮ್ಮ ಪಕ್ಷ ಬಿಡಲು ತಯಾರಿರುವ ಇನ್ನೂ ಹತ್ತು ಹಲವು ಮುಖಂಡರು, ನಾಯಕರನ್ನು ಕೇಳಿ ನೋಡಿ, ಅವರಿಂದ ಮಾಹಿತಿ ಸಿಗಬಹುದು. ಅಂದಹಾಗೆ, ಕಾಣೆಯಾಗಿರುವ ‘ವಿರೋಧ ಪಕ್ಷದ ನಾಯಕ’ನನ್ನು ಯಾವಾಗ ಹುಡುಕಿಕೊಡುವಿರಿ ಎಂದು ಟ್ವೀಟ್​ ಮೂಲಕ ವ್ಯಂಗ್ಯವಾಡಿದೆ.

RELATED ARTICLES

Related Articles

TRENDING ARTICLES