ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ಅಸ್ಟ್ರಾಜೆನೆಕಾ ಇಂಡಿಯಾ ಹಾಗೂ ರಾಜ್ಯ ಸರ್ಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಮಕ್ಷಮ ಇಲಾಖೆ ಆಯುಕ್ತ ರಂದೀಪ್ ಹಾಗೂ ಅಸ್ಟ್ರಾಜೆನಿಕಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಭಾರತದ ಅಧ್ಯಕ್ಷ ಡಾ.ಸಂಜೀವ್ ಪಾಂಚಾಲಾ ಪರಸ್ಪರ ತಿಳಿವಳಿಕೆಗೆ ಸಹಿ ಹಾಕಿ, ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.
ಇದನ್ನೂ ಓದಿ: ಗಂಗಾಜಲ ಮೇಲೆ ಯಾವುದೇ GST ಇಲ್ಲ!
ಈ ಒಡಂಬಡಿಕೆ ಪ್ರಕಾರ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಲಿದೆ.
ಒಂದೇ ಬಾರಿ 29 ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಯನ್ನು ಪರೀಕ್ಷಿಸುವ ಈ ತಂತ್ರಜ್ಞಾನವನ್ನು ‘ಕ್ಯೂರ್.ಎಐ’ ಅಭಿವೃದ್ಧಿಪಡಿಸಿದೆ.