Sunday, December 22, 2024

ಅಯ್ಯೋ ಪಾಪ..! ಸೀಟು ಬಿಡುವಂತೆ ವೃದ್ಧನಿಗೆ ಥಳಿಸಿದ ಮಹಿಳೆಯರು

ಯಾದಗಿರಿ : ರಾಜ್ಯ ಕಾಂಗ್ರೆಸ್​ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಇದೀಗ ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಅವಾಂತರ ನಡೆದಿದೆ. ಬಸ್‌ನಲ್ಲಿ ಸೀಟಿಗಾಗಿ ವಯೋವೃದ್ಧನನ್ನು ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಯಾದಗಿರಿಯಿಂದ ಸೇಡಂಗೆ ಹೊರಟಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿ ಓದಿದ್ದೀರಾ? : ಮೈಸೂರು ದಸರಾಗೆ ಆರಂಭದಲ್ಲಿ ವಿಘ್ನ: ಮುರಿದು ಬಿತ್ತು ದೀಪಾಲಂಕಾರ ಕಮಾನು!

ಬಸ್​ನಲ್ಲಿ ಕುಳಿತಿದ್ದ ವೃದ್ದನಿಗೆ ನಾಲ್ವರು ಮಹಿಳೆಯರು ಸೀಟು ಬಿಡುವಂತೆ ಹೇಳಿದ್ದಾರೆ. ಆದರೆ, ಮುಂದಿನ ಸೀಟು ಖಾಲಿ ಇವೆ ಅಲ್ಲಿ ಕುಳಿತುಕೊಳ್ಳಿ ಎಂದು ವೃದ್ಧ ಹೇಳಿದ್ದಾರೆ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಸಹಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯಾದಗಿರಿ ನಗರ ಠಾಣಾ ಪೊಲೀಸರು ವೃದ್ಧನ ಮೇಲೆ ಹಲ್ಲೆ ನಡೆಸಿದ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES