Thursday, December 19, 2024

ದೋರನಹಳ್ಳಿಯ ಶ್ರೀ ರಾಮಾನಂದ ಅವಧೂತ ಸ್ವಾಮಿ ಲಿಂಗೈಕ್ಯ

ಯಾದಗಿರಿ : ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ಶ್ರೀ ಸಿದ್ಧಾಶ್ರಮದ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ರಾಮಾನಂದ ಅವಧೂತ ಸ್ವಾಮಿ (92) ಲಿಂಗೈಕ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ರಮಾನಂದ ಶ್ರೀಗಳು ಇಂದು ಬೆಳಗಿನ ಜಾವ ಶ್ರೀಮಠದಲ್ಲಿ ಕೊನೆಯುಸಿರೆಳೆದಿದ್ದಾರೆ.

ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಸಿದ್ಧಾರೂಢ ಮಠದ ಸ್ವಾಮಿ ನೇತೃತ್ವದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗುತಿತ್ತು. ಜ್ಞಾನ ದಾಸೋಹ ಕಾರ್ಯಕ್ರಮ ಮೂಲಕ ಸ್ವಾಮೀಜಿಗಳು ಭಕ್ತ ಸಮೂಹಕ್ಕೆ ಅರಿವು ಮೂಡಿಸುತ್ತಿದ್ದರು.

ಜಾತಿ ಬೇಧ ಭಾವವೆನ್ನದೇ ಸಕಲ ಭಕ್ತರ ಒಳಿತನ್ನು ಬಯಸುತ್ತಿದ್ದರು. ಆದರೆ, ಇಂದು ಮುಂಜಾನೆ ಶ್ರೀ ರಾಮಾನಂದ ಅವಧೂತ ಸ್ವಾಮಿ ಲಿಂಗೈಕ್ಯರಾಗಿದ್ದಾರೆ. ಶ್ರೀ ರಾಮಾನಂದ ಅವಧೂತ ಸ್ವಾಮಿಗಳ ಅಗಲಿಕೆಯ ಸುದ್ದಿ ತಿಳಿದು ಭಕ್ತ ಸಮೂಹ ಕಂಬನಿ ಮಿಡಿದಿದೆ. ರಾಜಕೀಯ ಗಣ್ಯರು ಸೇರಿದಂತೆ ಹಲವು ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES