Monday, December 23, 2024

ಎಣ್ಣೆ ಪಾರ್ಟಿ : ಸರ್ಕಾರಿ ಕಚೇರಿಯಲ್ಲೇ ಕುಡಿದು, ಕುಣಿದು ಕುಪ್ಪಳಿಸಿದ ಸಿಬ್ಬಂದಿಗಳು

ಬೆಳಗಾವಿ : ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಸರ್ಕಾರಿ ನೌಕರರಿಂದ ಸರ್ಕಾರಿ ಕಚೇರಿಯಲ್ಲಿ ಮೊಜು ಮಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಳಕವಾಡಿಯಲ್ಲಿರುವ ಡಿಎಚ್​ಓ ಕಚೇರಿ ಹಿಂಭಾಗದ ಕೊಠಡಿಯಲ್ಲಿ ಡಿಎಚ್​ಓ ಕಚೇರಿಯ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ ಪೋಟೋ ಎದುರೇ ಕುಡಿದು, ಕುಣಿದು ಕುಪ್ಪಳಿಸಿದ್ದಾರೆ.

ಕುಡಿದ ನಶೆಯಲ್ಲಿ ಹಾಡು, ಡ್ಯಾನ್ಸ್, ಹರಟೆ ಮಾಡಿದ್ದಾರೆ. ಪಾರ್ಟಿಯಲ್ಲಿ ಡಿಎಚ್​ಓ ಕಾರು ಚಾಲಕ ಮಂಜುನಾಥ ಪಾಟೀಲ್, ಸಿಬ್ಬಂದಿ ಮಹೇಶ ಹಿರೇಮಠ ಸೇರಿ 6 ಜನ ಸಿಬ್ಬಂದಿ ಭಾಗಿಯಾಗಿದ್ದರೆ. ಇನ್ನು ಸಿಬ್ಬಂದಿಗಳ ಮೋಜು ಮಸ್ತಿ ಸ್ಥಳದ ಬಗ್ಗೆ ಪರಿಶೀಲನೆ‌ ನಡೆಸಿ ಕ್ರಮ ಜರುಗಿಸುತ್ತೇನೆ ಎಂದು ಡಿಎಚ್​ಓ ಡಾ. ಮಹೇಶ ಕೋಣಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES