Wednesday, January 22, 2025

ಆಸಿಸ್​ಗೆ 312 ರನ್​ಗಳ ಬಿಗ್ ಟಾರ್ಗೆಟ್ ನೀಡಿದ ಹರಿಣಗಳು

ಬೆಂಗಳೂರು : ಏಕದಿನ ವಿಶ್ವಕಪ್​ನ 10ನೇ ಪಂದ್ಯದಲ್ಲಿ ಆಸಿಸ್ ವಿರುದ್ಧದ ಪಂದ್ಯದಲ್ಲಿ ಹರಿಣಗಳು ಬಿಗ್​ ಟಾರ್ಗೆಟ್ ದಾಖಲಿಸಿದ್ದಾರೆ.

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್​ ಗಳಿಸಿತು.

ಹರಿಣಗಳ ಪರ ಡಿ ಕಾಕ್​ ಬೊಂಬಾಟ್ ಶತಕ (109) ಸಿಡಿಸಿದರು. ಮಾಕ್ರಂ 56, ಬಾವುಮಾ 35, ಖ್ಲಾಸೆನ್ 29, ಡಸ್ಸೆನ್ 26 ಹಾಗೂ ಡೇವಿಡ್ ಮಿಲ್ಲರ್ 17 ರನ್​ ಗಳಿಸಿದರು. ಆರಂಭ ಉತ್ತಮವಾಗಿದ್ದರು ಕೆಳ ಕ್ರಮಾಂಕದ ಬ್ಯಾಟರ್​ಗಳು ಆಸಿಸ್​ ಬೌಲರ್​ಗಳ ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿದರು. ಆಸಿಸ್ ಪರ ಮ್ಯಾಕ್ಸ್​ವೆಲ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಪಡೆದರು. ಕಮ್ಮಿನ್ಸ್, ಜೋಶ್ ಹಾಗೂ ಜಂಪಾ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.

RELATED ARTICLES

Related Articles

TRENDING ARTICLES