Sunday, December 22, 2024

ಸರ್.. ಬಸ್ ಫ್ರೀ ಆದ್ಮೇಲೆ ನಮ್ಮ ಹೆಂಗಸ್ರು ಕೆಂಪು ಬಸ್​ನಲ್ಲೇ ಇದ್ದಾರೆ : ರೈತರ ಅಳಲು

ಮಂಡ್ಯ : ಮಾಜಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಂಡ್ಯದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ಸಂವಾದದಲ್ಲಿ ಪಾಲ್ಗೊಂಡಿದ್ದ ರೈತರು ರಾಜ್ಯ ಕಾಂಗ್ರೆಸ್​ ಸರ್ಕಾರದ ಉಚಿತ ಯೋಜನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸರ್.. ಬಸ್ ಫ್ರೀ ಆದ ಬಳಿಕ ನಮ್ಮ ಹೆಂಗಸರು ಕೆಂಪು ಬಸ್​ನಲ್ಲೇ ಇದ್ದಾರೆ. ಮನೆಗಳಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿಲ್ಲ. ಉಚಿತ ಅಕ್ಕಿ ಕೊಡುತ್ತೇವೆ ಅಂತ ಕಳಪೆ ಅಕ್ಕಿ ನೀಡುತ್ತಿದ್ದಾರೆ. ಉಚಿತ ಭಾಗ್ಯಕ್ಕೆ ಆಸೆ ಬಿದ್ದು ಮೋಸ ಹೋಗಿದ್ದೇವೆ. ಮತ್ತೊಂದೆಡೆ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ, ರೈತರ ಮಕ್ಕಳು ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ ಅಂತ ಅಳಲು ತೋಡಿಕೊಂಡರು.

ಕಾಂಗ್ರೆಸ್ ಕತ್ತಲು ಭಾಗ್ಯ ಕೊಟ್ಟಿದೆ

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ 4 ಗಂಟೆ ಕರೆಂಟ್ ಕೊಡ್ತಿತ್ತು, ಇದೀಗ ಬರಿ 2 ಗಂಟೆ ಕರೆಂಟ್ ಕೊಡ್ತಿದೆ ಎಂದು ರೈತರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಫ್ರೀ ವಿದ್ಯುತ್ ಪೂರೈಕೆ ಅಂತ ಗ್ಯಾರಂಟಿ ಕೊಟ್ಟಿದ್ರು. ರೈತರಿಗೆ ಕತ್ತಲುಭಾಗ್ಯ ಕೊಟ್ಟು ಅಧಿಕಾರದ ಅಮಲಿನಲ್ಲಿದ್ದಾರೆ ಎಂದು ಕಿಡಿಕಾರಿದರು.

ರೈತರನ್ನ ಉದ್ದಾರ ಮಾಡಲ್ಲ

ಶಕ್ತಿ ಯೋಜನೆ ಕೊಟ್ಟು ಹೆಣ್ಣು ಮಕ್ಕಳು ಮನೆಯಲ್ಲಿ ಇರ್ತಿಲ್ಲ. ಎಲ್ಲರು ಬರಿ ಕೆಂಪು ಬಣ್ಣದ ಬಸ್ಸಿನ ಬಳಿ ಇದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟು ಜನರನ್ನ ಸಂಕಷ್ಟದ ಸ್ಥಿತಿಗೆ ಸಿಲುಕಿಸಿದ್ದಾರೆ. ಸಿದ್ದರಾಮಯ್ಯ ರೈತರನ್ನ ಉದ್ದಾರ ಮಾಡಲ್ಲ. ರೈತರಿಗೆ ಒಳೆಯದಾಗುವ ಕೆಲಸ ಮಾಡಿ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES