Wednesday, January 22, 2025

ಬೈಕ್ ಒಂದೇ.. ಆದ್ರೆ ಪ್ರಯಾಣಿಕರು ಏಳು ಮಂದಿ

ಬೆಂಗಳೂರು : ಸಾಮಾನ್ಯವಾಗಿ ಬೈಕ್‌ ಮೇಲೆ ಮೂರನೇ ವ್ಯಕ್ತಿ ಪ್ರಯಾಣಿಸುವುದನ್ನು ಕಂಡರೆ ಪೊಲೀಸರು ದಂಡ ಹಾಕಲು ಮುಂದಾಗುತ್ತಾರೆ. ಆದರೆ, ಇಲ್ಲಿ ಬೈಕ್‌ನಲ್ಲಿ ಎರಡು ನಾಯಿಗಳು, ಒಂದು ಕೋಳಿ ಮತ್ತು ಭಾರೀ ಸಾಮಾನುಗಳೊಂದಿಗೆ ಒಂದೇ ಬಾರಿಗೆ ಏಳು ಜನರು ಪ್ರಯಾಣಿಸುವುದನ್ನು ನೋಡಬಹುದು.

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಈ ವಿಡಿಯೋ ಪ್ರಕಾರ ಇಡೀ ಕುಟುಂಬವೇ ಬೈಕ್ ಮೇಲೆ ಪ್ರಯಾಣಿಸುತ್ತಿರುವಂತೆ ಇತ್ತು.

ಬೈಕ್ ಓಡಿಸುವ ವ್ಯಕ್ತಿ, ಮುಂದೆ ಇಬ್ಬರು ಮಕ್ಕಳು, ಹಿಂದೆ ಪತ್ನಿ, ಆಕೆಯ ಮೇಲೆ ಮಗು, ಆ ಮಗುವಿನ ಹಿಂದೆ ಇನ್ನಿಬ್ಬರು ಮಕ್ಕಳು ಕುಳಿತಿದ್ದಾರೆ. ಅವುಗಳ ಜೊತೆಗೆ ಎರಡು ನಾಯಿ ಮರಿಗಳೂ, ಒಂದು ಕೋಳಿಯೂ ಇದ್ದವು. ಇದಲ್ಲದೆ, ಅವರೊಂದಿಗೆ ಇನ್ನೂ ಅನೇಕಾನೇಕ ಸಾಮಾನುಗಳೂ ಇದ್ದವು.

ಎರಡು ನಾಯಿ, ಒಂದು ಕೋಳಿ, ಲಗೇಜ್

purvanchal51 ಹೆಸರಿನ ಖಾತೆಯಲ್ಲಿ ಈ ವೀಡಿಯೊ ಪೋಸ್ಟ್ ಮಾಡಲಾಗಿದೆ. ಇದು ವೈರಲ್ ಆಗಿದೆ. ಒಂದು ಬೈಕ್‌ನಲ್ಲಿ ಏಳು ಜನ, ಎರಡು ನಾಯಿಗಳು, ಒಂದು ಕೋಳಿ ಮತ್ತು ಲಗೇಜ್ ಕಾಣಬಹುದು. ಕೆಲವರು ಈ ವಿಡಿಯೋವನ್ನು ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ.

 

View this post on Instagram

 

A post shared by purvanchal (@purvanchal51)

RELATED ARTICLES

Related Articles

TRENDING ARTICLES