ಉಡುಪಿ: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ಚಿತ್ರದುರ್ಗದಿಂದ ಆರಂಭಿಸಿದ ಶೌರ್ಯ ಜಾಗರಣ ಯಾತ್ರೆ ಮಂಗಳವಾರ ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಂಡಿತು.
ಸಮಾವೇಶದಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ , ಸನಾತನ ಧರ್ಮವನ್ನು ವಿದೇಶಿಗರು ಅಪ್ಪಿ ಒಪ್ಪಲು ವಿಶ್ವ ಹಿಂದೂ ಪರಿಷತ್ ಕಾರಣ ಎಂದರು. ಶಿವಮೊಗ್ಗದಲ್ಲಿ ಹಿಂದೂಗಳ ಮನೆಗಳಿಗೆ ಕಲ್ಲು ಎಸೆದ ಮುಸ್ಲಿಂ ಪುಡಂರ ಕೃತ್ಯವನ್ನು ಖಂಡಿಸಿದ ಪೇಜಾವರ ಶ್ರೀಗಳು, ನಾವು ಹಿಂದೂಗಳು ಶಾಂತಿ ಪ್ರಿಯರು. ಧರ್ಮದ ಪ್ರತೀಕ ಶ್ರೀರಾಮ ಚಂದ್ರ, ಅವನೇ ನಮಗೆ ಆದರ್ಶ. ಈ ದೇಶದ ಕಣ ಕಣವೂ ಪವಿತ್ರ, ಮಾತೆಯರು ಸ್ವರ್ಗಕ್ಕೆ ಮಿಗಿಲು. ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ ತಲೆ ಒಡೆಯುವುದಿಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ. ಬಿರುಗಾಳಿ ಬೀಸಿದರೆ ಎದೆಯೊಡ್ಡಿ ನಿಲ್ಲಲೂ ನಾವು ಸಿದ್ಧ ಎಂದರು.
ಇದನ್ನೂ ಓದಿ: ಬಿರಿಯಾನಿ ಹೋಟೆಲ್ ಮೇಲೆ ಐಟಿ ದಾಳಿ : 1.47 ಕೋಟಿ ವ
ನಮ್ಮ ದೇಶವನ್ನು ಭಾರತ ಎನ್ನಲು ನಾಚಿಕೆ, ಹೇಸಿಗೆ ಪಡುವವರರು ಇದ್ದಾರೆ. ದೇಶ ವಿರೋಧಿಗಳು ಒಟ್ಟಾಗುತ್ತಾರೆ ಎಂದರೆ ನಾವೂ ಒಂದಾಗಬೇಕು. ನಮ್ಮ ಸಂಸ್ಕೃತಿ, ದೇಶ, ವೇಷಭೂಷಣಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.