ಬಾಗಲಕೋಟೆ : ಹಾವಾಸ್ ಉಗ್ರಾಮಿಗಳು ಇಸ್ರೇಲ್ ವಿರುದ್ಧ ಆರಂಭಿಸಿದ ಸಮರ ಯುದ್ಧ ಸ್ವರೂಪ ಪಡೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಎರಡು ದೇಶಗಳ ನಡುವೆ ಯುದ್ದದ ಕಾರ್ಮೊಡ ಕವಿದಿದ್ದು,ಇಸ್ರೆಲ್ ನಲ್ಲಿರೋ ಕನ್ನಡಿಗರ ಕುಟುಂಬಸ್ಥರಲ್ಲಿ ಆತಂಕ ಸೃಷ್ಠಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಯುವತಿ ಇಸ್ರೆಲ್ ನಲ್ಲಿ ಸಿಲುಕಿದ್ದು, ಯುವತಿಯ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿದೆ.
ಒಂದೆಡೆ ಎರಡು ದೇಶಗಳ ನಡುವೆ ನಡೆಯುತ್ತಿರೋ ಘನಘೋರ ಯುದ್ಧ.ಮತ್ತೊಂದೆಡೆ ಆ ದೇಶಗಳಲ್ಲಿ ಸಿಲುಕಿರೋ ಕನ್ನಡಿಗರು ಮತ್ತು ಅವರ ಕುಟುಂಬಗಳಲ್ಲಿ ಹೆಚ್ಚಿದ ಆತಂಕ. ಕುಟುಂಬಸ್ಥರ ಆತಂಕದಲ್ಲಿರುವ ಕುಟುಂಬಗಳಿಗೆ ದೈರ್ಯ ತುಂಬುತ್ತಿರೋ ಜಿಲ್ಲಾಡಳಿತ. ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಇಸ್ರೇಲ್ ಮತ್ತು ಪ್ಯಾಲಿಸ್ತೆನ್ ನಡುವನ ಯುದ್ದ.
ಇಸ್ರೇಲ್ ಮೇಲೆ ಘೋರ ದಾಳಿ ನಡೆಯುತ್ತಿದ್ದು, ಇಸ್ರೇಲ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಪೂಜಾ ಉಮದಿ ಕಳೆದೆರಡು ವರ್ಷದಿಂದ ಇಸ್ರೇಲ್ ನ ಟಿಸಿಎಸ್ ಕಂಪನಿಯಲ್ಲಿ ಉದ್ಯೋಗ ಮಾಡ್ತಿದ್ದಾಳೆ. ಇದೀಗ ಪೂಜಾ ಉಮದಿ ಅವರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ.ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ ಮಗಳನ್ನ ಸುರಕ್ಷಿತವಾಗಿ ಕರುನಾಡಿಗೆ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಯಬಾರಿ ಕಚೇರಿ ಜೊತೆ ಸಂಪರ್ಕ
ಇನ್ನು ಇಸ್ರೇಲ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಯುವತಿ ಪೂಜಾ ಉಮದಿ ಸಿಲುಕಿರೋ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾಡಳಿತ ರಬಕವಿ ಪಟ್ಟಣದಲ್ಲಿರುವ ಪೂಜಾ ಉಮದಿ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ರು. ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ್, ಡಿವೈಎಸ್ ಪಿ ಶಾಂತವೀರ ನೇತೃತ್ವದ ತಂಡ ಸಂಗಪ್ಪ ಉಮದಿ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಹೆಚ್ಚಿನ ಸಹಾಯ ಸಹಕಾರ ನೀಡುವ ಕಾರ್ಯ ಮಾಡಿದ್ರು. ಜಿಲ್ಲಾಡಳಿತವು ಕೂಡ ರಾಯಬಾರಿ ಕಚೇರಿ ಜೊತೆ ಸಂಪರ್ಕ ಹೊಂದಿದ್ದು ಮಾಹಿತಿ ಪಡೆದುಕೊಳ್ಳುತ್ತಿದೆ ಎಂದು ಡಿಸಿ ಕೆಎಂ ಜಾನಕಿ ಹೇಳಿದ್ರು.
ಕನ್ನಡಿಗರು ಮನೆ ಸೇರುವಂತಾಗಲಿ
ಒಟ್ಟಿನಲ್ಲಿ ಕ್ಷಣ ಕ್ಷಣಕ್ಕೂ ಇಸ್ರೇಲ್-ಪ್ಯಾಲಿಸ್ತೆನ ನಡುವಿನ ಸಮರ ಉಗ್ರ ರೂಪ ಪಡೆದುಕೊಳ್ಳುತ್ತಿದ್ದು, ಇಸ್ರೇಲ್ ನಲ್ಲಿ ಸಿಲುಕಿರೋ ಕನ್ನಡಿಗರ ಸುಕ್ಷತೆ ಬಗ್ಗೆ ಕೇಂದ್ರ ಸರ್ಕಾರ ತುರ್ತು ಕಾರ್ಯಕ್ಕೆ ಮುಂದಾಗಬೇಕಿದೆ. ಕನ್ನಡಿಗರ ಸುರಕ್ಷೆತೆಗಾಗಿ ಭಾರತೀಯ ಎಂಭಸ್ಸಿಗಳು ಕಾರ್ಯದ ಮೂಲಕ ಕನ್ನಡಿಗರು ತಮ್ಮ ತಮ್ಮ ಮನೆ ಸೇರುವಂತಾಗಲಿ ಅನ್ನೋದು ಸ್ಥಳೀಯರ ಮಾತು.