Monday, December 23, 2024

ರೋಹಿತ್ ಆರ್ಭಟ.. 63 ಎಸೆತಗಳಲ್ಲೇ ಶತಕ ಸಿಡಿಸಿದ ಹಿಟ್ ಮ್ಯಾನ್

ನವದೆಹಲಿ : ವಿಶ್ವಕಪ್​-2023 ಟೂರ್ನಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡದ ನಾಯಕ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿಸಿ ಬೊಬ್ಬಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಫ್ಘಾನ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಮುಂಬೈಕರ್ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಬಳಿಕ, 63 ಎಸೆತಗಳಲ್ಲಿ ಬೊಂಬಾಟ್ ಶತಕ ಬಾರಿಸಿದರು. ಇದರಲ್ಲಿ 12 ಬೌಂಡರಿ ಹಾಗೂ 4 ಬೊಂಬಾಟ್ ಸಿಕ್ಸರ್ ಗಳು ಸೇರಿವೆ.

ರೋಹಿತ್​ ಅಘ್ಫಾನ್ ಬೌಲರ್​ಗಳನ್ನು ಚಚ್ಚಿದ ರೀತಿಗೆ ಕ್ರಿಕೆಟ್ ಪ್ರೇಮಿಗಳು ಹಾಗೂ ನೆಟ್ಟಿಗರು ಫಿದಾ ಆದರು. ಒಮ್ಮೆ ಹಿಟ್​ ಮ್ಯಾನ್​ ಅಬ್ಬರ ಶುರುವಾದರೆ ಅಂತ್ಯ ಕಷ್ಟ ಎಂದು ಬಣ್ಣಿಸಿದ್ದಾರೆ. ಅಘ್ಫಾನ್ ನೀಡಿರುವ 273 ಸವಾಲಿನ ಗುರಿ ಬೆನ್ನತ್ತಿರುವ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಭರ್ಜರಿ ಆರಂಭ ನೀಡಿದರು.

RELATED ARTICLES

Related Articles

TRENDING ARTICLES