Monday, December 23, 2024

ರಾಬರಿ ಕಥೆ ಕಟ್ಟಿ 1 ಕೆ.ಜಿ. ಚಿನ್ನ ಎಗರಿಸಿದ್ದ ಕಳ್ಳರು ಅಂದರ್

ಬೆಂಗಳೂರು : ಗನ್ ಪಾಯಿಂಟ್ ರಾಬರಿ ಕಥೆ ಕಟ್ಟಿ 1 ಕೆ.ಜಿ. 262 ಗ್ರಾಂ ಚಿನ್ನಾಭರಣ ಎಗರಿಸಿದ್ದ ಸೇಲ್ಸ್ ಮನ್ಸ್ ಇಬ್ಬರನ್ನು ಹಲಸೂರು ಗೇಟ್​​ ಪೊಲೀಸರು ಬಂಧಿಸಿದ್ದಾರೆ.

ಲಾಲ್ ಸಿಂಗ್, ರಾಜ್ ಪಾಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಬರೋಬ್ಬರಿ 75 ಲಕ್ಷ ಮೌಲ್ಯದ ಚಿ‌ನ್ನಾಭರಣ ಜಪ್ತಿ ಮಾಡಲಾಗಿದೆ. ಇನ್ನು ಆರೋಪಿಗಳಾದ ಅಭಿಷೇಕ್ ಮತ್ತು ಓಂ ಪ್ರಕಾಶ್​​ಗಾಗಿ ಶೋಧ ನಡೆಸುತ್ತಿದ್ದಾರೆ.

ಹಲಸೂರು ಗೇಟ್​​ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿನ ಜುವೆಲ್ಲರಿ ಶಾಪ್​ ಮಾಲೀಕ ನಲ್ಲೂರಿನ ಜುವೆಲ್ಲರಿ ಮಾಲೀಕರಿಗೆ ಕೊಡಲು ಕೆಲಸಗಾರನ ಮೂಲಕ ಚಿನ್ನಾಭರಣ ಕೊಟ್ಟು ಕಳುಹಿಸಿದ್ರು. ಆದರೆ, ರಾಬರಿ ಗ್ಯಾಂಗ್​ ಅಟ್ಯಾಕ್​ ಮಾಡಿ ಚಿನ್ನಾಭರಣ ಎಗರಿಸಿದೆ ಎಂದು ಆರೋಪಿಗಳು ಕತೆ ಕಟ್ಟಿದ್ರು. ಈ ಸಂಬಂಧ ಹಲಸೂರು ಗೇಟ್​​​​ನಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನ, ಕಳವು ಪ್ರಕರಣ ಕೂಡ ದಾಖಲಾಗಿದೆ.

RELATED ARTICLES

Related Articles

TRENDING ARTICLES