ಬೆಂಗಳೂರು : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ವಿಜಯವಾಡ ಎಸಿಬಿ ಕೋರ್ಟ್ ಜಾಮೀನು ನೀಡಿದೆ.
ಕೌಶಲಾಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರಿಗೆ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ನಿನ್ನೆ ಚಂದ್ರಬಾಬು ನಾಯ್ಡು ಅವರು ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ದಿಢೀರ್ ಅಸ್ವಸ್ಥರಾಗಿದ್ದರು.
ಇನ್ನೂ ಈ ಹಗರಣದಲ್ಲಿ ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಜೈಲು ಹಕ್ಕಿಯಾಗಿದ್ದ ನಾಯ್ಡು
ಸ್ಕಿಲ್ ಹಗರಣಕ್ಕೆ ಸಂಬಂಧಿಸಿಂದತೆ ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲದಲ್ಲಿ ಬಂಧನ ಮಾಡಲಾಗಿತ್ತು. ಸ್ಕಿಲ್ ಹಗರಣದ A1 ಆರೋಪಿಯಾಗಿರುವ ಚಂದ್ರಬಾಬು ನಾಯ್ಡು ಅವರು ಹಗರಣಕ್ಕೆ ಸಂಬಂಧಿಸಿ ಸೂಕ್ತವಾದ ಉತ್ತರಗಳನ್ನು ನೀಡದ ಹಿನ್ನೆಲೆ ಜೈಲು ಹಕ್ಕಿಯಾಗಿದ್ದರು.