Monday, December 23, 2024

ರೋಹಿತ್-ಕೊಹ್ಲಿ ಅಬ್ಬರ : ಅಫ್ಘಾನ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ

ನವದೆಹಲಿ : ಹಿಟ್​ ಮ್ಯಾನ್ ರೋಹಿತ್ ಶರ್ಮಾ ಬೊಂಬಾಟ್ ಶತಕ.. ರನ್ ಮಷಿನ್ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕ.. ಭಾರತಕ್ಕೆ ಗ್ರ್ಯಾಂಡ್​ ವಿಕ್ಟರಿ.

ದೆಹಲಿಯಲ್ಲಿ ನಡೆದ ವಿಶ್ವಕಪ್​-2023 ಟೂರ್ನಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು.

ಅಫ್ಘಾನಿಸ್ತಾನ ನೀಡಿದ್ದ 273 ರನ್​ಗಳ ಸವಾಲಿನ ಟಾರ್ಗೆಟ್​ ಬೆನ್ನಟ್ಟಿದ ಭಾರತ 35 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. ಅಫ್ಘಾನ್ ಬೌಲರ್​ಗಳನ್ನು ಮನಸ್ಸೋಇಚ್ಛೆ ಚಚ್ಚಿದ ನಾಯಕ ರೋಹಿತ್ ಶರ್ಮಾ (131) ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದರು. ವಿರಾಟ್​ ಕೊಹ್ಲಿ (ಅಜೇಯ 55*) ಅರ್ಧಶತಕ ಸಿಡಿಸಿದರೆ, ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 47 ಹಾಗೂ ಶ್ರೇಯಸ್​ ಅಯ್ಯರ್ ಅಜೇಯ 25 ರನ್​ ಗಳಿಸಿದರು. ಅಫ್ಘಾನಿಸ್ತಾನ ರಶೀದ್ ಖಾನ್ 2 ವಿಕೆಟ್ ಪಡೆದರು.

ಹಿಟ್​ ಮ್ಯಾನ್ ಹಿಟ್​

ನಾಯಕ ರೋಹಿತ್ ಶರ್ಮಾ ಅಫ್ಘಾನ್ ಬೌಲಿಂಗ್ ಪಡೆಯನ್ನು ಧ್ವಂಸ ಮಾಡಿದ ಪರಿಗೆ ಕ್ರಿಕೆಟ್ ಪ್ರೇಮಿಗಳು ಮನಸೋತರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ಮುಂಬೈಕರ್ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಬಳಿಕ, 63 ಎಸೆತಗಳಲ್ಲಿ ಬೊಂಬಾಟ್ ಶತಕ (131) ಬಾರಿಸಿ ಔಟಾದರು. ರೋಹಿತ್​ ಬ್ಯಾಟ್​ನಿಂದ 16 ಬೌಂಡರಿ ಹಾಗೂ 5 ಬೊಂಬಾಟ್ ಸಿಕ್ಸರ್ ಹರಿದು ಬಂದವು.

RELATED ARTICLES

Related Articles

TRENDING ARTICLES