Sunday, May 19, 2024

ಇಸ್ರೇಲ್‌ ಜೊತೆ ಸಂಧಾನ ಮಾತುಕತೆಗೆ ಸಿದ್ಧ- ಹಮಾಸ್‌!

ಜೆರುಸಲೇಂ : ಇಸ್ರೇಲ್‌ನಿಂದ ಘಾತಕ ಏರ್‌ಸ್ಟ್ರೈಕ್‌ಗಳನ್ನು ಸ್ವೀಕರಿಸಿದ ಬಳಿಕ ಮೆತ್ತಗಾದಂತೆ ಕಾಣುತ್ತಿರುವ ಹಮಾಸ್‌ ಬಂಡುಕೋರ ಸಂಘಟನೆ, ಇಸ್ರೇಲ್‌ ಜೊತೆ ಸಂಧಾನ ಮಾತುಕತೆಗೆ ಸಿದ್ಧ ಎಂದು ಹೇಳಿದೆ.

ಹಮಾಸ್‌ ಈಗಾಗಲೇ ತನ್ನ ಗುರಿಗಳನ್ನು ಸಾಧಿಸಿದೆ. ಹಾಗಾಗಿ ಇಸ್ರೇಲ್‌ ವಿರುದ್ಧ ಸಂಭವನೀಯ ಕದನವಿರಾಮದ ಬಗ್ಗೆ ಮಾತುಕತೆಗಳನ್ನು ನಡೆಸಲು ನಾವು ಸಿದ್ಧ ಎಂದು ಹಮಾಸ್‌ ನಾಯಕ ಹೇಳಿದ್ದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ನೀರಿನ ಹೊಂಡಕ್ಕೆ ಬಿದ್ದು ಬಾಲಕರು ಸಾವು!

ಅಲ್ ಜಜೀರಾ ಜೊತೆಗಿನ ಫೋನ್ ಸಂದರ್ಶನದಲ್ಲಿ ಪತ್ರಕರ್ತರೊಬ್ಬರು ಇಸ್ಲಾಮಿಸ್ಟ್ ಗುಂಪು ಸಂಭವನೀಯ ಕದನ ವಿರಾಮವನ್ನು ಚರ್ಚಿಸಲು ಸಿದ್ಧವಾಗಿದೆಯೇ ಎಂದು ಕೇಳಿದಾಗ ಹಮಾಸ್ “ಆ ರೀತಿಯ ಏನಾದರೂ” ಮತ್ತು “ಎಲ್ಲಾ ರಾಜಕೀಯ ಸಂಭಾಷಣೆಗಳಿಗೆ” ಮುಕ್ತವಾಗಿದೆ ಎಂದು ಮೌಸಾ ಅಬು ಮರ್ಜೌಕ್ ತಿಳಿಸಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವಿನ ಯುದ್ಧದಲ್ಲಿ ಈವರೆಗೂ 1400ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಮಾಸ್‌ನ ಅತ್ಯಂತ ಭೀಕರ ದಾಳಿಗೆ ಅದಕ್ಕಿಂತಲೂ ಭೀಕರವಾಗಿ ದಾಳಿ ಮಾಡಿರುವ ಇಸ್ರೇಲ್‌, ನೀರು, ವಾಯು ಹಾಗೂ ಭೂಮಾರ್ಗವಾಗಿ ಗಾಜಾವನ್ನು ಸುತ್ತುವರಿದು ದಾಳಿ ಮಾಡಿದೆ.

RELATED ARTICLES

Related Articles

TRENDING ARTICLES