Saturday, May 18, 2024

ಪಾಕ್ ವಿರುದ್ಧ ಕೆರಳಿದ ಸಿಂಹಳಿಯರು : ಪಾಕಿಸ್ತಾನಕ್ಕೆ 345 ರನ್​ಗಳ ಬೃಹತ್ ಟಾರ್ಗೆಟ್

ಬೆಂಗಳೂರು : ವಿಶ್ವಕಪ್​-2023 ಟೂರ್ನಿಯ 8ನೇ ಪಂದ್ಯದಲ್ಲಿ ಪಾಕ್ ವಿರುದ್ಧ ಸಿಂಹಳಿಯರು ಘರ್ಜಿಸಿದರು. ಪಾಕ್​ ಬೌಲರ್​ಗಳನ್ನು ಮನಬಂದಂತೆ ಚಚ್ಚಿದ ಲಂಕಾ ಪಡೆ ಬೃಹತ್ ಟಾರ್ಗೆಟ್ ಸೆಟ್ ಮಾಡಿದೆ.

​ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ 345 ರನ್​ಗಳ ಬೃಹತ್ ಗುರಿ ನೀಡಿದೆ.

ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 344 ರನ್​ ಗಳಿಸಿದೆ. ಶ್ರೀಲಂಕಾ ಪರ ಇನ್ನರು ಶತಕ ಸಾಧನೆಗೈದರು. ಕುಶಾಲ್ ಮೆಂಡಿಸ್​ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಬೊಂಬಾಟ್ ಸಿಕ್ಸರ್​ ನೆರವಿನೊಂದಿಗೆ 122 ರನ್​ ಚಚ್ಚಿದರು. ಸದೀರಾ ಸಮರವಿಕ್ರಮ 89 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್​ನೊಂದಿಗೆ 108 ರನ್ ಸಿಡಿಸಿದರು.

ನಿರಾಸೆ ಮೂಡಿಸಿದ ಶನಕ

ಆರಂಭಿಕ ಆಟಗಾರ ನಿಸಾಂಕ 51, ಧನಂಜಯ 25 ರನ್​ ಗಳಿಸಿದರು. ಉಳಿದಂತೆ ನಾಯಕ ದಸುನ್ ಶನಕ 12 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನೂ ಕೆಳ ಕ್ರಮಾಂಕದ ಆಟಗಾರರು ಪಾಕ್ ಬೌಲರ್​ಗಳ ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿದರು. ಆದರೂ ಲಂಕಾ 344 ರನ್​ ಗುಡ್ಡೆ ಹಾಕಿತು. ಪಾಕಿಸ್ತಾನ ಬರ ಹಾಸನ್ ಅಲಿ 4, ರೌಫ್​ 2, ಶಾಹಿನ್, ನವಾಜ್ ಹಾಗೂ ಶಾದಾಬ್ ಅವರು ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES