Monday, May 20, 2024

ಇಕ್ಕಟ್ಟಿಗೆ ಸಿಲುಕಿದ ಮಿಯಾ ಖಲೀಫಾ!

ಇಸ್ರೇಲ್​-ಗಾಜಾ ಯುದ್ಧದ ಕುರಿತು ಮಾಜಿ ನೀಲಿ ತಾರೆ ಮಿಯಾ ಖಲೀಫಾ​ ಎಕ್ಸ್​ ಖಾತೆಯಲ್ಲಿ ಮಾಡಿರುವ ಕಾಮೆಂಟ್​ವೊಂದು ಇದೀಗ ವಿವಾದದ ಬಿರುಗಾಳಿ ಎಬ್ಬಿಸಿದೆ.

ಫೋನ್‌ಗಳನ್ನು ತಿರುಗಿಸಿ ಮತ್ತು ಅಡ್ಡಲಾಗಿ ಶೂಟ್​ ಮಾಡುವಂತೆ ಯಾರಾದರೊಬ್ಬರು ಪ್ಯಾಲೆಸ್ತೀನ್​ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಹೇಳುವಿರಾ ಎಂದು ಮಿಯಾ ಖಲೀಫಾ​ ಎಕ್ಸ್​ ಖಾತೆಯಲ್ಲಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹಮಾಸ್- ಇಸ್ರೇಲ್​ನಲ್ಲಿ ಕೋಲಾರ ಮೂಲದ ಮಹಿಳೆ: ಬಂಕರ್​ ನಲ್ಲಿ ಆಶ್ರಯ!

ಯುದ್ಧ ಪೀಡಿತ ಪ್ರದೇಶದಲ್ಲಿ ಹಮಾಸ್​ ಉಗ್ರರು, ಇಸ್ರೇಲ್​ ನಾಗರಿಕರನ್ನು ಮನಬಂದಂತೆ ದಂಡಿಸುತ್ತಿದ್ದು, ಕೊಲೆ, ಅತ್ಯಾಚಾರ ಮುಂತಾದ ಹೀನ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೆ ಮಿಯಾ ಮಾಡಿರುವ ಕಾಮೆಂಟ್​ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

 

RELATED ARTICLES

Related Articles

TRENDING ARTICLES