Saturday, January 11, 2025

ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ? : ಸಿದ್ದರಾಮಯ್ಯ

ಬೆಂಗಳೂರು : ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ? ಕುಮಾರಸ್ವಾಮಿ ಮಾತಿನಲ್ಲಿ ಸತ್ಯ ಇದ್ಯಾ? ಅವರ ಹೇಳಿಕೆಗಳಿಗೆಲ್ಲಾ ನಾನು ಉತ್ತರ ಕೊಡಲ್ಲ. ಕುಮಾರಸ್ವಾಮಿ ಬಗ್ಗೆ ನನ್ನ ಕೇಳಬೇಡಿ, ನಾನು ರಿಯಾಕ್ಟ್ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.

ಕುಮಾರಸ್ವಾಮಿ ಆರೋಪಕ್ಕೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ಪಾಪ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಬರುತ್ತೆ ಮುಖ್ಯಮಂತ್ರಿ ಆಗ್ತಿನಿ ಅಂತ ಅಂದುಕೊಂಡಿದ್ದರು. ಈಗ ಅದು ಆಗಲಿಲ್ಲ, ಅದಕ್ಕೆ ಏನೇನೋ ಮಾತನಾಡ್ತಾರೆ ಎಂದು ಕುಟುಕಿದರು.

ಜಾತಿಗಣತಿ ವರದಿ ವಿಚಾರವಾಗಿ ಸಿದ್ದರಾಮಯ್ಯ ತುಟಿ ಬಿಚ್ಚಿರಲಿಲ್ಲ ಎಂಬ ಹೆಚ್‌ಡಿಕೆ ಆರೋಪ ವಿಚಾರವಾಗಿ ಮಾತನಾಡಿ, ಹೋಗಿ ಪುಟ್ಟರಂಗಶೆಟ್ಟಿಯನ್ನ ಕೇಳಿ‌ ನೋಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನು ಮಾಡಿದ್ರು ಅಂತ ಅವರೇ ಹೇಳ್ತಾರೆ. ಪುಟ್ಟರಂಗಶೆಟ್ಟಿಯನ್ನು ಹೆದರಿಸಿ, ಬೈಯ್ದು ಕಳಿಸಿದ್ದರು. ಈಗ ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES