Monday, December 23, 2024

ಬೈಕ್​ನಲ್ಲಿ ಸ್ಟಂಟ್ ಮಾಡುತ್ತಾ ಯುವತಿಯರಿಗೆ ಚುಡಾಯಿಸ್ತಿದ್ದ ಭೂಪ ಅಂದರ್

ಬೆಂಗಳೂರು : ರಸ್ತೆಯಲ್ಲಿ ಬೈಕ್​ ಚಲಾಯಿಸುತ್ತಾ ಸಂಟ್ ಮಾಡುವುದಲ್ಲದೇ ಯುವತಿಯರನ್ನು ಚುಡಾಯಿಸುತ್ತಿದ್ದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ನೋಡಿ ಏನ್ ಸ್ಟೈಲಾಗಿ ಬೈಕ್ (ಸ್ಕೂಟಿ) ಚಲಾಯಿಸುತ್ತಾನೆ ಈ ಭೂಪ. ಇವನು ಸ್ಟೈಲ್​ ಆಗಿ ಬೈಕ್​ ಓಡಿಸಿದ ಮಾತ್ರಕ್ಕೆ ಸ್ಟಂಟ್​ ಮಾಸ್ಟರ್​ ಅಲ್ಲ. ಸ್ಕೂಟಿ ಓಡಿಸೋದ್ರ ಜೊತೆ ರಸ್ತೆಯಲ್ಲಿ ಕಾಣುವ ಯುವತಿಯರಿಗೆ ಅಶ್ಲೀಲಾಗಿ ಕಮೆಂಟ್ ಮಾಡುತ್ತಾ ಚುಡಾಯಿಸೋದು ಈತನ ಚಾಳಿ.

ಬೈಕ್​ನಲ್ಲಿ ಕಾಲು ಮೇಲೆ ಕಾಲು ಹಾಕಿ ಈ ಥರ ಶೋಕಿ ಮಾಡೋದು ಈ ಕೀಚಕನ ಕಾಯಕ. ಅಪಾಯಕಾರಿಯಾಗಿ ಸ್ಕೂಟಿ ಓಡ್ಸೋದಲ್ಲದೆ ಹುಡುಗೀರನ್ನು ಚೂಡಾಯಿಸುತ್ತಿದ್ದ. ಇದು ಗಮನಕ್ಕೆ ಬಂದ ಕೂಡಲೇ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

ರಸ್ತೆಯಲ್ಲಿ ಹೋಗುವ ಯುವತಿಯರಿಗೆ ಬ್ಯಾಡ್ ಕಾಮೆಂಟ್ ಮಾಡಿದ್ದ ಈ ಯುವಕ ಮೂಲತಃ ಗುಜರಾತ್​​ ನವನು. ಹುಡುಗಿಯರನ್ನು ಚುಡಾಯಿಸಿದ್ದ ಕಾರಣಕ್ಕೆ ಈತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಳಿಕ ಆರೋಪಿ ತನ್ನ ಎರಡೂ ಕಿವಿಗಳನ್ನು ಹಿಡಿದುಕೊಂಡು ಕ್ಷಮೆ ಕೇಳುವ ರೀತಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಹೀಗೆ ಪೊಲೀಸ್ರು ಎರಡೂ ಕಿವಿಗಳನ್ನು ಹಿಡಿಸಿ ರಸ್ತೆಯದ್ದಕ್ಕೂ ಮೆರವಣಿಗೆ ಮಾಡಿಸಿದ್ದಾರೆ.

RELATED ARTICLES

Related Articles

TRENDING ARTICLES