Thursday, January 9, 2025

ಪಂಚ ರಾಜ್ಯಗಳ ಚುನಾವಣೆ ಘೋಷಣೆ : ಡಿಸೆಂಬರ್ 3 ರಂದು ‘ಪಂಚ’ ಕದನ ಫಲಿತಾಂಶ

ಬೆಂಗಳೂರು : ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 7 ರಿಂದ ನವೆಂಬರ್ 30 ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಲಿದೆ.

ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರೋಂ ರಾಜ್ಯಗಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಮತದಾನ ನಡೆದ್ರೆ, ನಕ್ಸಲ್‍ಪೀಡಿತ ಛತ್ತೀಸ್‍ಗಢದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‍ಕುಮಾರ್ ಚುನಾವಣೆಯ ಮಾಹಿತಿ ನೀಡಿದರು.

ಪಂಚ ರಾಜ್ಯಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರುವಂತೆ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಿದರು. 90 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಕ್ಸಲ್‍ಪೀಡಿತ ಛತ್ತೀಸ್‍ಗಢದಲ್ಲಿ ನವೆಂಬರ್ 7 ರಂದು ಮೊದಲ ಹಂತ ಹಾಗೂ ನವೆಂಬರ್ 17 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

230 ವಿಧಾನಸಭಾ ಕ್ಷೇತ್ರ ಹೊಂದಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು, 200 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜಸ್ತಾನದಲ್ಲಿ ನವೆಂಬರ್ 23, 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಿಜೊರಾಂನಲ್ಲಿ ನವೆಂಬರ್ 7 ಮತ್ತು 119 ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ಜರುಗಲಿದೆ ಅಂತಾ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

  • ಚತ್ತೀಸ್​ಗಢ : ನವೆಂಬರ್ 7 ಮತ್ತು ನವೆಂಬರ್ 17 (2 ಹಂತಗಳು)
  • ತೆಲಂಗಾಣ : ನವೆಂಬರ್ 30
  • ಮಿಜೋರಾಂ : ನವೆಂಬರ್ 7
  • ರಾಜಸ್ತಾನ : ನವೆಂಬರ್ 23
  • ಮಧ್ಯಪ್ರದೇಶ : ನವೆಂಬರ್ 17

RELATED ARTICLES

Related Articles

TRENDING ARTICLES