Wednesday, January 22, 2025

ಮೋದಿ ಕೊಟ್ಟ ಅಕ್ಕಿಯನ್ನ ಜನ ಊಟ ಮಾಡ್ತಾ ಇದ್ದಾರೆ : ಜಿ.ಟಿ ದೇವೇಗೌಡ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಅಕ್ಕಿಯನ್ನ ಜನ ಊಟ ಮಾಡ್ತಾ ಇದ್ದಾರೆ. ಈ ಗ್ಯಾರಂಟಿ ಕೂಡ ಸುಳ್ಳು. ಬೆಳಕು ಕೊಡ್ತೀವಿ ಅಂದ್ರು, ಎಲ್ಲರಿಗೂ 200 ಯುನಿಟ್ ಅಂದ್ರು. ಆದರೆ, ಸರ್ಕಾರ ಜಾರಿಗೆ ತಂದಿದ್ದು 58 ಯುನಿಟ್. ಇದೂ ಕೂಡ ಸುಳ್ಳು… ಸುಳ್ಳು… ಸುಳ್ಳು… ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಗುಡುಗಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗೆ ಅಂಬೇಡ್ಕರ್ ಹಾಗೂ ಬಸವಣ್ಣ ಪ್ರೇರಣೆ ಅಂತ ಹೇಳ್ತಾರೆ ಸಿದ್ದರಾಮಯ್ಯ. ಮಹದೇವಪ್ಪ ಹೇಳ್ತಾರೆ.. ಸಿದ್ದರಾಮಯ್ಯ ಬಸವಣ್ಣ ಇದ್ದಂತೆ ಅಂತ. ಬಿಟ್ಟಿ ಭಾಗ್ಯ ಕೊಡ್ತಾ ಇದ್ದೀರಲಾ.. ನೀವೇಗೆ ಬಸವಣ್ಣ ಆಗ್ತೀರಾ? ನೀವು ಅನ್ನಭಾಗ್ಯ ಕೊಡ್ತೀನಿ ಅಂದ್ರಲಾ ಎಲ್ಲಿ ಕೊಟ್ಟಿದ್ದೀರಾ? ಎಂದು  ಕಿಡಿಕಾರಿದರು.

ಇನ್ನೂ 2,000 ಸಾವಿರ ಕೊಟ್ಟಿದ್ದಾರಲಾ ಅದು ಕೂಡ ಸರಿಯಾಗಿಲ್ಲ. ಯಜಮಾನಿ ಇಲ್ಲದ ಮನೆಯಲ್ಲಿ ಯಜಮಾನನಿಗೆ ಕೊಡಬೇಕಲಾ ಅದೂ ಸುಳ್ಳು. ಫ್ರೀ ಬಸ್ ಘೋಷಣೆ ಮಾಡಿದ್ರು, ಮಹಿಳೆಯರು ಓಡಾಡ್ತಾ ಇದ್ದಾರೆ. ವಿದ್ಯಾರ್ಥಿಗಳಿಗೆ ಈಗ ಬಸ್ ಕೊರತೆ ಆಗಿದೆ. ಸ್ವಾಭಿಮಾನದಿಂದ ಬದುಕಿ ಅಂತ ಬಸವಣ್ಣನವರು ಹೇಳಿದ್ದು ಎಂದು ವಾಗ್ದಾಳಿ ನಡೆಸಿದರು.

ಒಂದು ರೂ. ಬಿಡುಗಡೆ ಮಾಡಿಲ್ಲ

ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಬೋರ್ ವೆಲ್, ನಾಲೆ ಕೆರೆಕಟ್ಟೆಗಳಲ್ಲಿ ನೀರಿಲ್ಲ. ಇಷ್ಟಾದರೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇಂತ ಸರ್ಕಾರ ಇಡೀ ದೇಶದಲ್ಲಿ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಸಿದ್ದರಾಮಯ್ಯ ವಿರುದ್ಧ ಜಿ.ಟಿ. ದೇವೇಗೌಡ ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES