ಬೆಂಗಳೂರು : ನನಗೂ ಐದು ವರ್ಷದಲ್ಲಿ ಪಾಲಿದೆ ಅಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳ್ತಾ ಇಲ್ಲ. ಡಿ.ಕೆ. ಶಿವಕುಮಾರ್ ಪರಿಸ್ಥಿತಿ ಹೇಗೆ ಅಂದ್ರೆ.. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಲೇವಡಿ ಮಾಡಿದ್ದಾರೆ.
ಮೈತ್ರಿ ಸರ್ಕಾರ ತೆಗೆದಿದ್ದೆ ಡಿ.ಕೆ. ಶಿವಕುಮಾರ್ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಇಂಚಿಚು ಗೊತ್ತಿದೆ. ಯಾವುದು ನಮಗೆ ಹೇಳಿಲ್ಲಾ. ನನಗೆ ಅಲ್ಲಾ ನಮ್ಮ ಶಾಸಕರಿಗೆ ಹೇಳಿಲ್ಲಾ. ಯಾರು ಯಾರು ತೆಗೆದಿದ್ರು ಅಂತ ಅವರು ಅವತ್ತೇ ಹೇಳಬೇಕಿತ್ತು ಎಂದಿದ್ದಾರೆ.
ರಾಜ್ಯ ಸರ್ಕಾರ ಬಂದು 5 ತಿಂಗಳು ಆಯ್ತು. 30 ವರ್ಷಗಳಲ್ಲಿ ಇಂತಹ ಬೆಂಬಲ ಸಿಕ್ಕಿರಲಿಲ್ಲ ಅಂತ ಹೇಳಿದ್ರು. ಅದರ ಜತೆ 5 ಗ್ಯಾರಂಟಿ ಜಾರಿಗೆ ತರುತ್ತೇವೆ. ಬಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ರು.. ಕೃಷಿ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಸಾಧ್ಯ ಇಲ್ಲ ಅಂತ. ಕೃಷಿಯಲ್ಲಿ ಬೆಳವಣಿಗೆ ಆಗುವ ಮೂಲಕ ರೈತರು ಅಭಿವೃದ್ಧಿ ಆಗಬೇಕು ಅಂತ ಹೇಳಿದ್ರು. ನಮಗೆ ಇದು ಬಾರಿ ಸಂತೋಷ ಆಯ್ತು ಎಂದು ಕುಟುಕಿದ್ದಾರೆ.
ಕಿಸಾನ್ ಯೋಜನೆ ಅನುದಾನ ನಿಲ್ಲಿಸಿದ್ರಲ್ಲ..!
ಕಿಸಾನ್ ಯೋಜನೆಗೆ ಯಡಿಯೂರಪ್ಪ ಘೋಷಣೆ ಮಾಡಿದ್ದ ಅನುದಾನ ನಿಲ್ಲಿಸಿದ್ರಲ್ಲ.. ನಿಮ್ಮ ಕೊಡುಗೆ ರೈತರಿಗೆ ಏನೂ ಅಂತ ಹೇಳಬೇಕು ತಾನೇ. ರೈತರ ಸ್ಥಿತಿ ಚಿಂತಾಜನಕವಾಗಿದೆ. ಕೆರೆ ಕಟ್ಟೆಗಳಲ್ಲಿ ನೀರು ಇಲ್ಲ, ಕರೆಂಟ್ ಎಷ್ಟು ಸಮಯ ಕೊಡುತ್ತಿದ್ದಿರಾ? 2 ಗಂಟೆ ಕರೆಂಟ್ ಕೊಡುತ್ತಿದ್ದಿರಾ? ರೈತರು ಮತ್ತು ಪಂಪ್ ಸೆಟ್ ಗಳ ಸ್ಥಿತಿ ಏನು? ಎಂದು ಜಿ.ಟಿ. ದೇವೇಗೌಡ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಒಂದು ಪ್ರಶ್ನೆ ಕೇಳ್ತೀನಿ
ಸಿಎಂ ಒಂದು ಪ್ರಶ್ನೆ ಕೇಳುತ್ತೇನೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ ಅಂತ ಅವರೆ ಹೇಳಿದ್ದಾರೆ. ಇದರಿಂದ 4 ಸಾವಿರ ಕೋಟಿ ನಷ್ಟ ಆಗಿದೆ ಅಂತ ಅವರೇ ಹೇಳಿದ್ದಾರೆ. 195 ತಾಲ್ಲೂಕುಗಳನ್ನ ಬರಿ ಪೀಡಿತ ಅಂತ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ. ಅವರ ಜಮೀನುಗಳಿಗೆ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.