Monday, December 23, 2024

BBMPಯ ಮತ್ತೊಂದು ಹಗರಣ ಬಯಲು : ಮಾರ್ಷಲ್​ಗಳ ‘ವೇತನ’ದಲ್ಲಿ ಗೋಲ್ಮಾಲ್!

ಬೆಂಗಳೂರು : BBMP ಅಂದರೆನೇ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ BBMP ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. BBMP ಮಾರ್ಷಲ್​​ಗಳ ಹೆಸರಲ್ಲಿ BBMP ಕೋಟಿ ಕೋಟಿ ಹಣ ಲೂಟಿ ಹೊಡೆಯುತ್ತಿದೆ. ಕಡಿಮೆ ವೇತನ ನೀಡಿ ಹೆಚ್ಚು ನೀಡ್ತಿದ್ದೇವೆಂದು ದಾಖಲೆಯಲ್ಲಿ ತೋರಿಸಿದೆ. ಅದಕ್ಕೆ ಸಾಕ್ಷಿಯೂ ಲಭ್ಯವಾಗಿದೆ.

ಭ್ರಷ್ಟಾಚಾರದ ಯೂನಿವರ್ಸಿಟಿ BBMP ಅಂದ್ರೆ ತಪ್ಪಾಗಲ. ಯಾಕೆಂದರೆ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲೂ ಏನಾದರೂ ಒಂದು ಗೋಲ್​ಮಾಲ್​ ನಡೆದೇ ಇರುತ್ತದೆ. ಅದೇರೀತಿ ಇದೀಗ ಬಿಬಿಎಂಪಿಯ ವೇತನ ಗೋಲ್​​ಮಾಲ್​ ಬಹಿರಂಗವಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿಗಳಲ್ಲಿರುವ ಮಾರ್ಷಲ್​ಗಳಿಗೆ ನೀಡೋ ಸಂಬಳದಲ್ಲೂ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ.

ಬಿಬಿಎಂಪಿ ಭ್ರಷ್ಟ ಅಧಿಕಾರಿಗಳ ಮುಖವಾಡ ಮತ್ತೊಮ್ಮೆ ಕಳಚಿದೆ. ಮಾರ್ಷಲ್​ಗಳ ಸಂಬಳದಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿರೋ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 750 ಮಾರ್ಷಲ್​ಗಳನ್ನ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳು ಒಬ್ಬ ಮಾರ್ಷಲ್​​ಗೆ ಬಿಬಿಎಂಪಿಯಿಂದ 25 ಸಾವಿರ ವೇತನ ನೀಡಲಾಗ್ತಿದೆ. ಆದ್ರೆ ಮಾರ್ಷಲ್ ಕೈಗೆ ಸೇರೋದು ಕೇವಲ 17 ಸಾವಿರ ಹಣ ಮಾತ್ರ. ಹಾಗಾದ್ರೆ ಉಳಿದ 8 ಸಾವಿರ ಭ್ರಷ್ಟ ಅಧಿಕಾರಿಗಳ ಪಾಲಾಗ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ರವರನ್ನ ಕೇಳಿದರೆ ಉಡಾಫೆ ಉತ್ತರ ಕೊಡ್ತಿದ್ದಾರೆ.

25,000 ಬದಲಿಗೆ 17,000

ಇನ್ನು ಪ್ರತಿ ತಿಂಗಳು ಮಾರ್ಷಲ್​ಗಳ ಬ್ಯಾಂಕ್​ ಖಾತೆಗೆ 25 ಸಾವಿರ ಬದಲಿಗೆ 17 ಸಾವಿರ ಹಣ ಜಮೆ ಆಗ್ತಿದೆ. ಈ ಬ್ಯಾಂಕ್​ ಸ್ಟೇಟ್​ಮೆಂಟ್​ ಸಹ ಪವರ್​ ಟಿವಿಗೆ ಲಭ್ಯವಾಗಿದೆ. ಒಟ್ನಲ್ಲಿ ಬಿಬಿಎಂಪಿ ಆಧಿಕಾರಿಗಳು ಮಾರ್ಷಲ್ ಸಂಬಳದಲ್ಲೂ ಹಣ ಲೂಟಿ ಮಾಡ್ತಿರೋದು ಹಿರಿಯ ಅಧಿಕಾರಿಗಳ ಗಮನಕೆ ಬಂದಿದ್ರು ಕಣ್ಣು ಮುಚ್ಚಿ ಕುಳಿತಿದ್ದಾರೆ.

RELATED ARTICLES

Related Articles

TRENDING ARTICLES