ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಸಿಬಿಐ ಮತ್ತೆ ತನಿಖೆಗಿಳಿದಿದೆ.
ಯೋಗೇಶಗೌಡ ಹತ್ಯೆ ಪ್ರಕರಣದ ಹಿಂದಿನ ತನಿಖಾಧಿಕಾರಿ ಚನ್ನಕೇಶವ ಟಿಂಗರಿಕರ ಮನೆಗೆ ಸಿಬಿಐ ದಾಳ ಹಾಕಿದ್ದು. ಚನ್ನಕೇಶವ ಟಿಂಗರಿಕರ್ ಬಂಧನಕ್ಕೆ ಸಿಬಿಐ ಮುಂದಾದ ತಕ್ಷಣ ಟಿಂಗರಿಕರ್ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಪಾಲೆಸ್ತೀನ್ ಸಂಘರ್ಷ, 400 ಜನ ಸಾವು!
ಚನ್ನಕೇಶವ ಟಿಂಗರಿಕರ್ ಮನೆ ಧಾರವಾಡದ ಮಲಪ್ರಭಾ ನಗರದಲ್ಲಿದ್ದು, ಸದ್ಯ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿಂಗರಿಕರ ಯೋಗೇಶ್ ಗೌಡನ ಹತ್ಯೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಮೊದಲು ಟಿಂಗರಿಕರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ಅವಧಿ ಮುಗಿದ ಬಳಿಕ ಎಫ್‌ಐಆರ್‌ಗೆ ತಡೆ ತರಲು
ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಕಳೆದ ವಾರ ಹೈಕೋರ್ಟ್ ಎಫ್‌ಐಆರ್ ರದ್ಧತಿ ಅರ್ಜಿ ವಜಾಗೊಳಿಸಿತ್ತು. ಅರ್ಜಿ ವಜಾ ಹಿನ್ನೆಲೆ ಸಿಬಿಐ ಟಿಂಗರಿಕರ ಬಂಧನಕ್ಕೆ ಮುಂದಾಗಿದೆ. 2016ರ ಜೂನ್ 15ರಂದು ಯೋಗೀಶಗೌಡ ಕೊಲೆ ನಡೆದಿತ್ತು. ಈ ವೇಳೆ ಟಿಂಗರಿಕರ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದರು.