Saturday, January 11, 2025

ಈಜಿಪ್ಟ್‌ನಲ್ಲೂ ಇಸ್ರೇಲಿಗಳ ಹತ್ಯೆ!

ಈಜಿಪ್ಟ್​: ಅಲೆಕ್ಸಾಂಡ್ರಿಯಾದಲ್ಲಿ ಈಜಿಪ್ಟ್​ನ ಪೊಲೀಸ್ ಅಧಿಕಾರಿಯೊಬ್ಬರು ಇಸ್ರೇಲ್ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಜತೆಗೆ ಈಜಿಪ್ಟ್​ನ ಓರ್ವ ಪ್ರಜೆ ಕೂಡ ಮೃತಪಟ್ಟಿದ್ದಾರೆ.

ಇಸ್ರೇಲ್​ನ ಪ್ರವಾಸಿ ಗುಂಪು ಪ್ರಯಾಣಿಸುತ್ತಿದ್ದ ಬಸ್​ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ. ಗಾಜಾ ಪಟ್ಟಿಯಿಂದ ರಾಕೆಟ್‌ಗಳ ಸುರಿಮಳೆಗೈದ ನಂತರ ಇಸ್ರೇಲ್ ಪ್ಯಾಲೆಸ್ತೇನ್​ನ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವ ನಡುವೆ ಈ ಘಟನೆ ನಡೆದಿದೆ.  ಅಲೆಕ್ಸಾಂಡ್ರಿಯಾದ ಪಾಂಪೀಸ್ ಪಿಲ್ಲರ್ ಸೈಟ್‌ನಲ್ಲಿ ನಡೆದ ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.  ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರಿಂದ ಸರ್ವ ಸಮ್ಮತಿ

ಭದ್ರತಾ ಪಡೆಗಳು ದಾಳಿಯ ಸ್ಥಳವನ್ನು ತ್ವರಿತವಾಗಿ ಸುತ್ತುವರೆದವು. ಇಸ್ರೇಲ್ ಹಾಗೂ ಹಮಾಸ್ ನಡುವೆ ತಿಕ್ಕಾಟ ನಡೆದಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳನ್ನು ಹಾರಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಇದುವರೆಗೆ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

RELATED ARTICLES

Related Articles

TRENDING ARTICLES