Thursday, December 19, 2024

ಪಟಾಕಿ ದುರಂತ : ಇಬ್ಬರು ಅರೆಸ್ಟ್ :ಡಿಜಿ ಐಜಿಪಿ ಅಲೋಕ್ ಮೋಹನ್​!

ಆನೇಕಲ್ ​: ತಾಲೂಕಿನ  ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಡಿಜಿ ಐಜಿಪಿ ಅಲೋಕ್​ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಅತ್ತಿಬೆಲೆ ಅಗ್ನಿ ದುರಂತ ತುಂಬಾ ಕೆಟ್ಟ ಘಟನೆ ಈ ಗೊಡೌನ್​ ನಲ್ಲಿ 35 ಜನ ಕೆಲಸ ನಿರ್ವಹಿಸುತ್ತಿದ್ದರು ಈ ಪೈಕಿ 14 ಜನರ ಸಾವಾಗಿದೆ ಎಂದ ಹೇಳಿದರು.

ಇದನ್ನೂ ಓದಿ: ಮಂಡ್ಯದ ಮನ್​​ಮುಲ್​​ನಲ್ಲಿ ಅಗ್ನಿ ಅವಘಡ!

ಘಟನೆ ಸಂಬಂಧ ಗೊಡೌನ್ ನ ಮಾಲೀಕ  ಮತ್ತು ಕೆಲಸಗಾರನೊಬ್ಬನ ಬಂಧನ ಮಾಡಲಾಗಿದೆ. ಈ ಘಟನೆಯಲ್ಲಿ ಒಟ್ಟು ಐದು ಜನ ಆರೋಪಿಗಳು ಇದ್ದಾರೆ. ಅಪರಾಧ ಕೃತ್ಯದಲ್ಲಿ ನಮ್ಮ ಇಲಾಖೆ ಇರಲಿ, ಯಾವುದೇ ಇಲಾಖೆ ಇರಲಿ. ಈ ಪ್ರಕರಣದಲ್ಲಿ ಯಾರೇ ಇದ್ರು ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES