Wednesday, January 22, 2025

ದರ್ಪ..! ಗನ್​ಮ್ಯಾನ್​ ಕಪಾಳಕ್ಕೆ ಹೊಡೆದ ತೆಲಂಗಾಣ ಗೃಹ ಸಚಿವ

ಬೆಂಗಳೂರು : ಸಮಾವೇಶದ ವೇಳೆ ಹೂಗುಚ್ಛ ತಂದು ಕೊಟ್ಟಿಲ್ಲ ಅಂತ ತೆಲಂಗಾಣ ಗೃಹ ಸಚಿವ ಮೊಹ್ಮದ್​ ಅಲಿ ತಮ್ಮ ಭದ್ರತಾ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಗೃಹಸಚಿವರು ಸಂಪುಟ ಸಹೋದ್ಯೋಗಿ ಟಿ. ಶ್ರೀನಿವಾಸ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಆಲಂಗಿಸಿದರು. ಈ ವೇಳೆ ಹೂಗುಚ್ಛ ನೀಡಲು ಸನ್ನೆ ಮಾಡಿದ ಗೃಹಸಚಿವರಿಗೆ ಭದ್ರತಾ ಸಿಬ್ಬಂದಿ ಹೂಗುಚ್ಚ ನೀಡಿರಲಿಲ್ಲ. ಇದರಿಂದ ಕುಪಿತರಾರ ಗೃಹ ಸಚಿವರು ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನು ಗಮನಿಸಿದ ಟಿ. ಶ್ರೀನಿವಾಸ್​, ಭದ್ರತಾ ಸಿಬ್ಬಂದಿಯ ಬೆನ್ನುತಟ್ಟಿ ಬೇಸರ ಮಾಡಿಕೊಳ್ಳಬೇಡ ಎಂದು ಸಂತೈಸಿದ್ದಾರೆ. ಅಷ್ಟರಲ್ಲೇ ಹೂಗುಚ್ಛ ಸಚಿವರ ಕೈಗೆ ಬಂದಿದೆ. ಕೊನೆಗೆ ಶಾಲು ಹೊದಿಸಿ, ಹೂ ನೀಡಿ ಸನ್ಮಾನ ಮಾಡಿದ್ದಾರೆ. ಈ ದೃಶ್ಯ ಎಲ್ಲಡೆ ವೈರಲ್​ ಆಗ್ತಿದ್ದು ಗೃಹ ಸಚಿವರ ನಡೆಗೆ ಭಾರೀ ಟೀಕೆ ವ್ಯಕ್ತವಾಗ್ತಿದೆ.

ಅಲಿ ನಡೆಗೆ ಬಿಜೆಪಿ ಖಂಡನೆ

ಗೃಹ ಸಚಿವ ಅಲಿ ಅವರು ತಮ್ಮ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆಯನ್ನು ಬಿಜೆಪಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಅರವಿಂದ ಧರ್ಮಪುರಿ ಅವರು, ಅಲಿ ಅವರು ಗನ್​ಮ್ಯಾನ್​ಗೆ ಹೊಡೆದ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಪರಸ್ಪರ ಗೌರವಿಸುವುದು ಹಾಗೂ ಶಿಷ್ಟಾಚಾರ ಪಾಲನೆಯಿಂದ ನಾಯಕತ್ವ ಬೆಳೆಯಲಿದೆ. ಅಲಿ ಅವರ ವರ್ತನೆ ಸ್ವೀಕಾರಆರ್ಹವಲ್ಲ ಎಂದು Xನಲ್ಲಿ ಪೋಸ್ಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES