Monday, December 23, 2024

ಅಕ್ಟೋಬರ್ 7 : ಜಹೀರ್, ಪೂಜಾ ಗಾಂಧಿ ಸೇರಿ ಇಂದು ಯಾರೆಲ್ಲ ಗಣ್ಯರ ಹುಟ್ಟುಹಬ್ಬ ಗೊತ್ತಾ?

ಬೆಂಗಳೂರು : ಇತಿಹಾಸದಲ್ಲಿ ಅಕ್ಟೋಬರ್ 7(ಇಂದು) ವಿಶೇಷ ದಿನವೇ ಸರಿ. ಇಂದು ಅನೇಕ ಸಾಧಕರು ಹಾಗೂ ಗಣ್ಯರ ಹುಟ್ಟುಹಬ್ಬ.

ನೊಬೆಲ್​ ಪ್ರಶಸ್ತಿ ವಿಜೇತ, ಭೌತಶಾಸ್ತ್ರಜ್ಞ ನೀಲ್ಸ್​ ಬೋರ್​ ಅವರು 7 ಅಕ್ಟೋಬರ್ 1885ರಂದು ಜನಿಸಿದರು. 1999ರ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡಿದ್ದ ನಟಿ ಯುಕ್ತಾ ಮುಖಿ ಅವರು ಇಂದೇ ಜನಿಸಿದ್ದು.

ಸಿಖ್ಖರ ಕೊನೆಯ ಗುರು ಗುರು ಗೋವಿಂದ್​ ಸಿಂಗ್​ ಅವರು 1708ರಲ್ಲಿ ಜನಿಸಿದರು. ಗುರು ಗೋವಿಂದ್‌ ಸಿಂಗ್‌ ಅವರು ಅನ್ಯಾಯ ಮತ್ತು ಶೋಷಣೆಯ ವಿರುದ್ದ ಹೋರಾಡಿದ ತತ್ವಜ್ಞಾನಿ, ಜನರ ಸಂಕಷ್ಟವನ್ನು ನಿವಾರಣೆ ಮಾಡುವುದೇ ಅತ್ಯಂತ ದೊಡ್ಡ ಸೇವೆ ಎಂದು ಪ್ರತಿಪಾದಿಸಿದ  ಸಿಖ್ಖ್ ಪಂಥದ 10ನೇ ಧರ್ಮಗುರು.

ಭಾರತದ ಮಾಜಿ ಕ್ರಿಕೆಟ್ ಆಟಗಾರ ಜಹೀರ್​ ಖಾನ್​ ಅವರ ಜನ್ಮದಿನ. ಇವರು ಅಕ್ಟೋಬರ್ 7, 1978ರಲ್ಲಿ ಜನಿಸಿದರು. 2011 ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು. ಅಥ್ಲೀಟ್​ ಅಶ್ವಿನ್​ ಅಕ್ಕುಂಜಿ ಅವರು ಇದೇ ದಿನ 1987ಎಂದು ಜನಿಸಿದರು.

ಪೂಜಾ ಗಾಂಧಿ ಜನ್ಮದಿನ

ಒಂದು ಕಾಲದಲ್ಲಿ ಸ್ಯಾಂಡಲ್​​ವುಡ್​​ನಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ ಮುಂಗಾರು ಮಳೆಯ ಬೆಡಗಿ ಪೂಜಾ ಗಾಂಧಿ ಇಂದು 40ನೇ ಬರ್ತ್​ಡೇ ಸಂಭ್ರಮ. 2006ರಲ್ಲಿ ತೆರೆಕಂಡ ‘ಮುಂಗಾರು ಮಳೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು .ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಗಾಯಕಿ ಸಂಗೀತ ಕಟ್ಟಿ ಅವರ ಜನ್ಮದಿನ. ಇವರು ಅಕ್ಟೋಬರ್ 7, 1970ರಲ್ಲಿ ಜನಿಸಿದರು. ಇನ್ನೂ ಸಚಿವ ಎಂ.ಬಿ. ಪಾಟೀಲ್​ ಅವರು ಸಹ 1964, ಅಕ್ಟೋಬರ್ 7ರಂದು ಜನಿಸಿದರು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲಾ ಸಾಧಕರು ಹಾಗೂ ಗಣ್ಯರಿಗೆ ನಿಮ್ಮ ಪವರ್​ ಟಿವಿ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.

RELATED ARTICLES

Related Articles

TRENDING ARTICLES