Monday, December 23, 2024

ಶಿಗ್ಗಾವಿ, ಹಾನಗಲ್, ಬ್ಯಾಡಗಿ ತಾಲೂಕು ಬರ ಘೋಷಣೆ ಮಾಡದಿದ್ದರೆ ಹೋರಾಟ: ಬೊಮ್ಮಾಯಿ

ಹಾವೇರಿ: ರಾಜ್ಯ ಸರ್ಕಾರ ಬಾಯಿ ಮಾತಲ್ಲಿ ಬರ ಪರಿಹಾರ ಮಾಡಿತ್ತೇವೆ ಎಂದರೆ ಸಾಲದು, ತಕ್ಷಣ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶಿಗ್ಗಾವಿಯಲ್ಲಿ ಇಂದು ಶಿಗ್ಗಾವಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ನಿರಂತರ ವಿಳಂಬ ಮಾಡುತ್ತ, ಸೆಪ್ಟಂಬರ್ ನಲ್ಲಿ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾನಗಲ್, ಬ್ಯಾಡಗಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದು, ಸೋಮವಾರ ಬರ ತಾಲೂಕುಗಳೆಂದು ಘೋಷಣೆ ಮಾಡದಿದ್ದರೆ ರೈತರ ಜೊತೆ ಹೋರಾಟ ನಡೆಸಲಾಗುವುದು. ಈಗಾಗಲೇ ಕಂದಾಯ ಸಚಿವರೊಂದಿಗೆ ಮಾತನಾಡಿದ್ದು, ಅವರು ಮಾನದಂಡಗಳನ್ನು ನೋಡಿ ಈ ತಿಂಗಳಾಂತ್ಯಕ್ಕೆ ಘೊಷಣೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಚಿನ್ನ ನೀಡಿ 60 ಲಕ್ಷ ರೂ. ವಂಚನೆ!

ಆದರೆ, ಬಿತ್ತಿದ ಬೆಳೆ ಬಾರದಿರುವುದು, ನೀರಿಲ್ಲದಿರುವುದನ್ನು ನೋಡಿ ಬರ ತಾಲೂಕುಗಳೆಂದು ಘೋಷಣೆ ಮಾಡುವಂತೆ ಆಗ್ರಹಿಸಿದ್ದೆನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬರ ತಾಲೂಕುಗಳೆಂದು ಘೋಷಣೆ ಮಾಡುವ ವಿಶ್ವಾಸ ಇದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ಧರೆ, ರೈತರೊಂದಿಗೆ ಸೇರಿ ಸೋಮವಾರದ ನಂತರ ಹೋರಾಟ ನಡೆಸಲಾಗುವುದು ಎಂದರು.

ತಕ್ಷಣ ಪರಿಹಾರ ನೀಡಿ:

ಸರ್ಕಾರ ಕೇವಲ ಬರ ತಾಲೂಕುಗಳೆಂದು ಘೋಷಣೆ ಮಾಡಿದರೆ ಸಾಲದು. ಬರ ಪರಿಹಾರ, ಮೇವು,ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಕೇವಲ ಮಾತಿನಿಂದ ಬರ ಪರಿಹಾರ ಮಾಡಲು ಸಾಧ್ಯವಿಲ್ಲ.‌ಕೇಂದ್ರ ಸರ್ಕಾರ ಈಗಾಗಲೇ ಮೊದಲ ಕಂತಿನಲ್ಲಿ 250 ಕೋಟಿ ರೂ. ಬಿಡಿಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ವಯಕ್ತಿಕ ಖಾತೆಯಲ್ಲಿ ಹದಿನೈದು ಒಪ್ಪತ್ತು ಕೋಟಿವರೂಪಾಯಿ ಹಣ ಇದೆ. ಸರ್ಕಾರ ಮನಸು ಮಾಡಿದರೆ ಮೊದಲು ರೈತರಿಗೆ ಬೆಳೆ ಪರಿಹಾರ ನೀಡಬೇಕು.

ರೈತರು ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದಾನೆ. ಅವರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ಬರ ಅಧ್ಯಯನ, ಸಮೀಕ್ಷೆ ನಂತರ ನಡೆಯಲಿ. ಸರ್ಕಾರ ಪರಿಹಾರದ ಜೊತೆಗೆ ರೈತರು ಮಾಡಿರುವ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲಗಳನ್ನು ದೀರ್ಘಾವಧಿ ಸಾಲಗಳಾಗಿ ಪರಿವರ್ತಿಸಬೇಕು. ಹಾಗೂ ತಕ್ಷಣ ಹೊಸ ಸಾಲ. ನೀಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೆ ನಾವು ಅಧಿಕಾರ ನಡೆಸಿದಾಗ ಪ್ರವಾಹ ಬಂದಿತ್ತು. ಆಗ ನಾವು ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸಲಿಲ್ಲ ತಕ್ಷಣ 2500 ಕೋಟಿ ಪರಿ ಹಾರ ಬಿಡುಗಡೆ ಮಾಡಿ ಒಂದು ತಿಂಗಳಲ್ಲಿ ವಿತರಣೆ ಮಾಡಿದ್ದೇವು. ಕೇಂದ್ರದ ಮಾನದಂಡಗಳ ಪ್ರಕಾರ ಒಣ ಬೇಸಾಯಕ್ಕೆ 6 ಸಾವಿರ ರೂ. ಪರಿಹಾರ ಕೊಡುತ್ತಾರೆ. ನಾವು 13 ಸಾವಿರ ಪರಿಹಾರ ಕೊಟ್ಟಿದ್ದೇವು. ನೀರಾವರಿಗೆ 13 ಸಾವಿರ ಇತ್ತು ನಾವು 25 ಸಾವಿರ ಕೊಟ್ಟೆವು. ತೋಟಗಾರಿಕೆಗೆ 18 ಸಾವಿರ ಇತ್ತು ನಾವು 28 ಸಾವಿರ ಪರಿಹಾರ ಕೊಟ್ಟಿದ್ದೇವು. ಇದಕ್ಕೆ ಯಾವುದೇ ಮಾನದಂಡ ಅಡ್ಡಿ ಬರಲಿಲ್ಲ. ಪರಿಹಾರ ನೀಡಬೇಕು ಎನ್ನುವ ಮನಸ್ಸು ಇರಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES