Saturday, January 18, 2025

ಇತಿಹಾಸ ಸೃಷ್ಟಿ.. ನಿಜವಾಯ್ತು ‘ಅಬ್ ಕಿ ಬಾರ್, 100 ಪಾರ್’ ಧ್ಯೇಯ ವಾಕ್ಯ

ಬೆಂಗಳೂರು : ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತ ಪದಕಗಳ ಸೆಂಚುರಿ ಸಿಡಿಸಿ ಸಂಭ್ರಮಿಸುತ್ತಿದೆ.

ನಿನ್ನೆ 95ಕ್ಕೆ ಏರಿಕೆಯಾಗಿದ್ದ ಪದಕಗಳ ಸಂಖ್ಯೆಗೆ ಇಂದು ಮತ್ತೆ 5 ಪದಕ ಸೇರಿಸುವ ಮೂಲಕ ಈ ಮೈಲುಗಲ್ಲು ಸಾಧಿಸಿದೆ. ಈ ಮೂಲಕ ಅಬ್​ ಕಿ ಬಾರ್​.. 100 ಪಾರ್​ ಎಂಬ ಧ್ಯೇಯ ವಾಕ್ಯವನ್ನು ನಮ್ಮ ಕ್ರೀಡಾಪಟುಗಳು ನಿಜವಾಗಿಸಿದ್ದಾರೆ. ಈ ಸಾಧನೆಯಒಂದಿಗೆ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಈಡೇರಿದಂತಾಗಿದೆ.

ಏಷ್ಯನ್​​ ಗೇಮ್ಸ್​ ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ ಸಿಕ್ಕಿದೆ. 2018ರಲ್ಲಿ 70 ಪದಕ ಗೆದ್ದಿದ್ದೇ ಈವರೆಗಿನ ದೊಡ್ಡ ಸಾಧನೆಯಾಗಿದೆ. ಭಾರತದ ಅಥ್ಲೀಟ್​ಗಳು 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಗೆದ್ದಿದ್ದಾರೆ. ಚೀನಾ 354 ಪದಕ, ಜಪಾನ್​ 169, ಕೊರಿಯಾ 169 ಪದಕ ಸಿಕ್ಕಿದೆ.

ಪ್ರಧಾನಿ ಮೋದಿ ಅಭಿನಂದನೆ

ಏಷ್ಯನ್​ ಗೇಮ್ಸ್​ನಲ್ಲಿ ಭಾರತ 100 ಪದಕಗಳನ್ನು ಗೆದ್ದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತಕ್ಕೆ ಇದೊಂದು ಪ್ರಮುಖ ಸಾಧನೆ. ಈ ಐತಿಹಾಸಿಕ ಸಾಧನೆಗೆ ಕಾರಣರಾದ ಎಲ್ಲಾ ಕ್ರೀಡಾಪಟುಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರತಿಯೊಂದು ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ಸೃಷ್ಟಿಸಿದೆ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES