ಬೆಂಗಳೂರು : ಇಂದು KSRTC ಬಳಗಕ್ಕೆ ಸೇರಲಿವೆ ‘ಪಲ್ಲಕ್ಕಿ ಉತ್ಸವ’ ಬ್ರ್ಯಾಂಡ್ ನ 40 ಹೊಸ ಐಶಾರಾಮಿ ಬಸ್ ಗಳು. ಪಲ್ಲಕ್ಕಿ ಹೆಸರಿನ KSRTC ನಾನ್ AC ಬಸ್ಗಳನ್ನು ಇಂದು ಉದ್ಘಾಟನೆ ಮಾಡಲಾಗುತ್ತದೆ.
100 ನೂತನ ಕರ್ನಾಟಕ ಸಾರಿಗೆ ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ಗಳಿಗೆ ಚಾಲನೆ ನೀಡಲಾಗುತ್ತದೆ. ವಿಧಾನಸೌಧದ ಪೂರ್ವಧ್ವಾರದ ಮುಂಭಾಗ ಸಿಎಂ ಸಿದ್ದರಾಮಯ್ಯ ಅವರು ಪಲ್ಲಕ್ಕಿ ಬಸ್ಗಳಿಗೆ ಚಾಲನೆ ನೀಡಲಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಲ್ಲಿಂದ KSRTC, BMTC ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸಮಾರ್ಗಗಳಲ್ಲಿ BMTC ಬಸ್ ಸಂಚಾರ ಆರಂಭ ಮಾಡಲಿದೆ. ಬೆಂಗಳೂರಿನ 8ನೇ ಮೈಲಿಯಿಂದ ಕಾಚೋಹಳ್ಳಿ ಗೇಟ್ವರೆಗೆ 3 ಬಸ್‌ಗಳು ನಿತ್ಯ 27 ಟ್ರಿಪ್ ಸಂಚಾರ ಮಾಡಲಿವೆ. ಜಾಲಹಳ್ಳಿ ಕ್ರಾಸ್‌ನಿಂದ ಚಿಕ್ಕಬಾಣಾವರ, ಅಬ್ಬಿಗೆರೆ ಕ್ರಾಸ್, ಗಂಗಮ್ಮ ಸರ್ಕಲ್ ಮೂಲಕ BEL ಸರ್ಕಲ್‌ವರೆಗೆ 4 ಬಸ್‌ಗಳು ನಿತ್ಯ 31 ಟ್ರಿಪ್ ಸಂಚಾರ ಮಾಡಲಿವೆ.. ಈ ಕುರಿತು BMTC ಪ್ರಕಟಣೆ ಹೊರಡಿಸಿದೆ.
ಸರ್ಕಾರಿ ಬಸ್ಗಳ ಸೌಲಭ್ಯವೇ ಇಲ್ಲ
ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ಗಳ ಸೌಲಭ್ಯ ಇಲ್ಲದಂತಾಗಿದೆ. ಚಾಮರಾಜನಗರದ ಕುಮಚಹಳ್ಳಿಯಲ್ಲಿ ಸಾರಿಗೆ ಬಸ್ಗಳ ಕೊರತೆ ಎದುರಾಗಿದೆ. ಕುಮಚಹಳ್ಳಿಗೆ ಬೆಳಗ್ಗೆ 5 ಗಂಟೆಗೇ ಒಂದು ಸರ್ಕಾರಿ ಬಸ್ ಬಂದು ಹೋಗುತ್ತೆ. ದಿನದಲ್ಲಿ ಒಂದು ಹೊತ್ತು ಮಾತ್ರ ಬಸ್ ಬರುತ್ತಿದ್ದು, ಜನರು ಖಾಸಗಿ ಬಸ್ಗಳನ್ನು ಅವಲಂಬಿಸಬೇಕಾಗಿದೆ.
ಸಮಸ್ಯೆ ಬಗೆಹರಿಸುವ ಭರವಸೆ
ಇನ್ನು ಈ ಗ್ರಾಮದ ಜನರು ಶಕ್ತಿ ಯೋಜನೆಯಿಂದ ಮಾತ್ರವಲ್ಲ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. KSRTC ಬಸ್ ಇಲ್ಲ, ರಸ್ತೆ ಇಲ್ಲ, ಕುಡಿಯೋ ನೀರಿಗೂ ಸಮಸ್ಯೆ ಇದೆ. ಕುಮಚಹಳ್ಳಿ ಕುಗ್ರಾಮವಾಗಿ ಉಳಿದುಬಿಟ್ಟಿದೆ. ಈ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇನ್ನು ಈ ಸಮಸ್ಯೆ ಕುರಿತು ನಿಮ್ಮ ಪವರ್ ಟಿವಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.