Wednesday, January 22, 2025

ಚೈತ್ರಾ ಬಂಧನದ ಹಿಂದಿನ ರಹಸ್ಯ ರಿವೀಲ್​​!

ಬೆಂಗಳೂರು: ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ್ದ ಚೈತ್ರಾ ಆ್ಯಂಡ್​​ ಗ್ಯಾಂಗ್​ ವಿರುದ್ಧದ ತನಿಖೆ ಮುಂದುವರಿದಿದೆ. ಸಿಸಿಬಿ ಟೀಂ ತನಿಖೆ ನಡೆಸುತ್ತಿದೆ.

ವಂಚಕಿ ಚೈತ್ರಾ ಅರೆಸ್ಟ್​ ಆಗಿದ್ದರ ಹಿಂದೆ ರೋಚಕ ಕಥೆಯೇ ಇದೆ. ಚೈತ್ರಾ ವಿರುದ್ಧ ಪ್ರಕರಣ ದಾಖಲಾಗ್ತಿದ್ದಂತೆ ಚೈತ್ರಾಳ ಚಲನ-ವಲನದ ಬಗ್ಗೆ ಸಿಸಿಬಿ ಕಣ್ಣಿಟ್ಟಿತ್ತು. ಚೈತ್ರಾ ಬಂಧನಕ್ಕೆ ಸಿಸಿಬಿ ಟೀಂ ಹಿಂದುತ್ವದ ಮೊರೆ ಹೋಗಿತ್ತು. ಚೈತ್ರಾ ಯಾರ್ಯಾರ ಸಂಪರ್ಕದಲ್ಲಿದ್ದಳು ಎಲ್ಲೆಲ್ಲಿ ಹೋಗುತ್ತಿದ್ದಳು? ಯಾರನ್ನ ಭೇಟಿಯಾಗುತ್ತಿದ್ದಳು ಎಂಬುದರ ಬಗ್ಗೆ ಸಿಸಿಬಿ ತನಿಖೆ ನಡೆಸಿತ್ತು.

ಇದನ್ನೂ ಓದಿ: ಹೊಸ ಮಾರ್ಗಗಳಿಗೆ ಬಿಎಂಟಿಸಿ ಬಸ್ ಸೇವೆ!

ಇನ್ನು, ಚಾಲಾಕಿ ಚೈತ್ರಾ ತಾನು ಮೊದಲು ಬಳಸುತ್ತಿದ್ದ ಮೊಬೈಲ್​ ಸ್ವಿಚ್​ ಆಫ್​ ಮಾಡಿ ಬೇರೆ ಮೊಬೈಲ್​ ಬಳಸುತ್ತಿದ್ದಳು. ಕೊನೆಗೆ ಟೆಕ್ನಿಕಲ್‌ ಟೀಂ ಮೊರೆ ಹೋಗಿದ್ದ ಸಿಸಿಬಿ, ಹಿಂದೂ ಕಾರ್ಯಕರ್ತನ ರೀತಿ ಮಾತನಾಡಿ ಚೈತ್ರಾಳನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಯ್ತು.

RELATED ARTICLES

Related Articles

TRENDING ARTICLES