Monday, December 23, 2024

ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನಕ್ಕೆ 81 ರನ್​ಗಳ ಭರ್ಜರಿ ಗೆಲುವು

ಬೆಂಗಳೂರು : ಏಕದಿನ ವಿಶ್ವಕಪ್-2023ರ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಪಾಕಿಸ್ತಾನ ತಂಡ 81 ರನ್​ಗಳ ಭರ್ಜರಿ ಗೆಲವು ಸಾಧಿಸಿದೆ.

ಟಾಸ್ ಗೆದ್ದ ನೆದರ್ಲೆಂಡ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ನೆದರ್ಲೆಂಡ್ಸ್‌ ಆಘಾತ ನೀಡಿತು. ಆರಂಭಿಕ ಆಟಗಾರ ಫಖರ್‌ ಜಮಾನ್‌ (12), ಇಮಾಮ್‌ ಉಲ್‌ ಹಕ್‌ (15) ಹಾಗೂ ಬಾಬರ್‌ ಅಜಮ್‌ (5) ರನ್​ಗೆ ಪೆವಿಲಿಯನ್‌ ಸೇರಿದರು.

ಸಂಕಷ್ಟದಲ್ಲಿದ್ದ ಪಾಕ್​ಗೆ ಮೊಹಮದ್‌ ರಿಜ್ವಾನ್‌  ಹಾಗೂ ಸೌದ್‌ ಶಕೀಲ್‌ 120 ರನ್‌ ಜೊತೆಯಾಟವಾಡಿ ಬೂಸ್ಟ್​ ನೀಡಿದರು. ಇಬ್ಬರೂ ತಲಾ 68 ರನ್‌ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಮೊಹಮದ್‌ ನವಾಜ್‌ 39 ರನ್‌ ಹಾಗೂ ಶಾದಾಬ್‌ ಖಾನ್‌ 32 ರನ್‌ ಬಾರಿಸಿ ಪಾಕಿಸ್ತಾನಕ್ಕೆ ಚೇತರಿಕೆ ನೀಡಿದರು. 49 ಓವರ್​ಗಳಲ್ಲಿ ಆಲ್ಔಟ್​ ಆಗಿ 286 ರನ್​ ಕಲೆಹಾಕಿತು.

287 ರನ್​ಗಳ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ಸ್‌ ತಂಡ 41 ಓವರ್‌ಗಳಲ್ಲಿ 205 ರನ್‌ಗೆ ಆಲೌಟ್‌ ಆಯಿತು. ಡಿ ಲೀಡೆ ನೆದರ್ಲೆಂಡ್ಸ್​ ಪರ ಗರಿಷ್ಠ 67 ರನ್ ಹಾಗೂ ವಿಕ್ರಂಜೀತ್ 52 ರನ್​ ಬಾರಿಸಿದರು. ಪಾಕ್​ ಪರ ರೌಫ್​ 3, ಹಸನ್ 2 ವಿಕೆಟ್ ಪಡೆದರು. ಬೌಲರ್‌ಗಳ ಮಿಂಚಿನ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ ಶುಭಾರಂಭ ಮಾಡಿತು.

RELATED ARTICLES

Related Articles

TRENDING ARTICLES