ದಕ್ಷಿಣ ಕನ್ನಡ : ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚಮೊಗರು ಎಂಬಲ್ಲಿ ಹಿಂದೂಗಳ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಕೆಲ ಕಿಡಿಗೇಡಿಗಳು ಗಲಭೆಗೆ ಯತ್ನಿಸಿದ್ದಾರೆ. ಸೆಪ್ಟೆಂಬರ್ 30ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಈದ್ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟಿದ್ದಾರೆ. ಇನ್ನು ಈ ಘಟನೆ ಕುರಿತು ಹೊಸಬೆಟ್ಟು PDO ಶೇಖರ್ ಗಮನಕ್ಕೆ ತಂದರೂ ಸಹ PDO ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡುಬಿದ್ರೆ ಇನ್ಸ್‌ಪೆಕ್ಟರ್ P.G.ಸಂದೇಶ್ ಭೇಟಿ ನೀಡಿ, ಬಾವುಟ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ಯುವತಿ ಆತ್ಮಹತ್ಯೆ: ದೂರು ದಾಖಲಿಸಲು ಹಿಂದೇಟು, PSI ಅಮಾನತು!
PDO ವರ್ತನೆಗೆ ಇನ್ಸ್‌ಪೆಕ್ಟರ್ ಸಂದೇಶ್ ಕೆಂಡಾಮಂಡಲರಾಗಿದ್ದಾರೆ. ಇದರ ಮೇಲೆ ಬಾವುಟ ಹಾಕಲು ಅನುಮತಿ ತೆಗೊಂಡಿದ್ದಾರಾ? ನಿನ್ನ ಕೆಲಸ ಏನು ಅಂತ ನಿನಗೆ ಗೊತ್ತಿಲ್ಲವೆಂದ ಮೇಲೆ ಏನ್ ಮಾಡ್ತಿದ್ದೀಯಾ ಎಂದು PDO ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.