Monday, December 23, 2024

ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಚೆನ್ನಾಗಿ ನಡೆಸುವುದು ಕಷ್ಟ : ಸಿದ್ದರಾಮಯ್ಯ

ಹಿರಿಯೂರು : ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಚಿವ ಡಿ. ಸುಧಾಕರ್ ಮನವಿ ಮಾಡಿದ್ದಾರೆ. ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಚೆನ್ನಾಗಿ‌ ನಡೆಸುವುದು ಕಷ್ಟ. ಖಾಸಗಿಯವರು ಯಾರಾದದೂ ಬರುತ್ತಾರಾ ಅಂತ ನೋಡುತ್ತೇವೆ. ಈ ಭಾಗದಲ್ಲಿ ಕಬ್ಬು ಬೆಳೆಯಲು ಸಮರ್ಪಕ‌ ನೀರು ಇದೆಯೇ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಬಬ್ಬೂರು ಫಾರಂನಲ್ಲಿ ಬಬ್ಬೂರು ಕೃಷಿ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಚಿವ ಡಿ. ಸುಧಾಕರ್ ಅವರು ಕೃಷಿ ಕಾಲೇಜು, ಶಾಸಕ ರಘುಮೂರ್ತಿ ಸಂಶೋಧನಾ ಕೇಂದ್ರ ಕೇಳಿದ್ದಾರೆ. ಇಬ್ಬರೂ ಒಂದೇ ತಾಲೂಕಿನವರು ಅಲ್ಲವೇ? ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ‌ರ ಹೆಸರು ಹೇಳುವಾಗ ಡಿ. ಸುಧಾಕರ್ ಬದಲಿಗೆ ಬಾಯಿತಪ್ಪಿ ಡಾ. ಸುಧಾಕರ್ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಸಚಿವ ಡಿ. ಸುಧಾಕರ್ ಎಂದಿದ್ದಕ್ಕೆ ‘ಯು ಆರ್ ನಾಟ್ ಎ ಡಾಕ್ಟರ್’ ಕುಳಿತುಕೋ ಎಂದರು. ಸಿಎಂ ಮಾತಿನಿಂದ ಸಮಾರಂಭದಲ್ಲಿದ್ದ ಜನ ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.

ಶಾಸಕರು, ಸಚಿವರಾದಾಗ ವಿವಿ ಮಾಡಿಸಿದೆವೆಂಬುದು ಮುಖ್ಯ ಅಲ್ಲ. ಕೋಲ್ ಮನ್ ಎಂಬುವರು ಸ್ವತಃ ವಿಜ್ಞಾನಿ ಆಗಿದ್ದರು. ಕೊಳೆ ರೋಗಕ್ಕೆ ಔಷಧಿ‌ ಕಂಡು ಹಿಡಿದಿದ್ದರು. ವಿಜ್ಞಾನಿ ಆದವರು ಏನು ಕಂಡು ಹಿಡಿದಿದ್ದೇವೆ ಎಂಬುದು ಮುಖ್ಯ. ವಿಜ್ಞಾನಿಗಳು ಹೆಚ್ಚು ಸಂಶೋಧನೆಗೆ ಒತ್ತು ನೀಡಬೇಕು. ಸರ್ಕಾರ ವಿಜ್ಞಾನಿಗಳಿಗೆ ಸಂಶೋಧನೆಗೆ ನೆರವು ನೀಡಲಿದೆ ಎಂದು ಹೇಳಿದರು.

ಎಷ್ಟೇ ಕಷ್ಟವಾದರೂ ಹಣ ಕೊಡುತ್ತೇನೆ

ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಅಂತ ಡಿಸಿಗಳಿಗೆ ಹೇಳಿದ್ದೇನೆ. ಎಷ್ಟೇ ಕಷ್ಟವಾದರೂ ಹಣ ಕೊಡುತ್ತೇನೆ ಎಂದಿದ್ದೇನೆ. ಜಾನುವಾರುಗಳಿಗೆ ಮೇವು ಕೊಡುವ ವ್ಯವಸ್ಥೆ ಆಗಬೇಕು. ಜನರು ಗೂಳೆ ಹೋಗದಂತೆ ಎಚ್ವರಿಕೆ ವಹಿಸಬೇಕು. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಥವನ್ನು ಎದುರಿಸುತ್ತೇವೆ. ಚಿತ್ರದುರ್ಗದಲ್ಲಿ ನೀರಿಗೆ ಸಮಸ್ಯೆಯಾದರೆ ನೀವೆ ಹೊಣೆ ಎಂದು ಸಿದ್ದರಾಮಯ್ಯ ಅಧಿಕಾರಿಗಳತ್ತ ಬೊಟ್ಟು ಮಾಡಿದರು.

RELATED ARTICLES

Related Articles

TRENDING ARTICLES