ಬೆಂಗಳೂರು : ಕರ್ನಾಟಕದ IMA ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ಕೋರ್ಟ್ ಗುಡ್‌ನ್ಯೂಸ್ ನೀಡಿದೆ. 70 ಕೋಟಿ ಹಣವನ್ನ ಸಮಾನವಾಗಿ ಹಂಚಲು ಬೆಂಗಳೂರಿನ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
IMAನಲ್ಲಿ 55 ಸಾವಿರ ಠೇವಣಿದಾರರು ಹೂಡಿಕೆ ಮಾಡಿದ್ದಾರೆ. ಕಂಪನಿಯ ಚರಾಸ್ಥಿ 70 ಕೋಟಿ ಇದ್ದು, ಈ ಹಣವನ್ನು ಹಣ ಕಳೆದುಕೊಂಡವರಿಗೆ ಹಂಚಲು ಕೋರ್ಟ್ ಆದೇಶ ಹೊರಡಿಸಿದೆ. ಇದು ಪವರ್ ಟಿವಿ ಐತಿಹಾಸಿಕ ತನಿಖಾ ವರದಿಯ ಬಹುದೊಡ್ಡ ಇಂಪ್ಯಾಕ್ಟ್ ಆಗಿದೆ.
ಚರಾಸ್ಥಿ ಅಂದ್ರೆ ಗೋಲ್ಡ್, ಸಿಲ್ವರ್, ವಾಹನಗಳ ಹರಾಜು ಹಾಕಿ ಬಂದ ಮೊತ್ತವನ್ನು ಹಣವನ್ನು ಠೇವಣಿದಾರರಿಗೆ ಹಂಚಲಾಗುತ್ತದೆ. 20 ದಿನಗಳ ಒಳಗೆ ಹಣ ಹಂಚಿಕೆ ಮಾಡಿ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇನ್ನು IMA ಬಹುಕೋಟಿ ವಂಚನೆ ಪ್ರಕರಣವನ್ನು ಪವರ್ ಟಿವಿ ಬಯಲಿಗೆಳೆದಿತ್ತು. ಪವರ್ ಟಿವಿ ತನಿಖಾ ವರದಿಗೆ ಠೇವಣಿದಾರರು ಬಹುಪರಾಕ್ ಎನ್ನುತ್ತಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರು ಮೂಲದ ಐಎಂಎ ಮತ್ತು ಅದರ ಗುಂಪು ಸಂಸ್ಥೆಗಳು ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡು 4,000 ಕೋಟಿ ರೂ. ವಂಚಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ನ ರೋಷನ್ ಬೇಗ್, ಜಮೀರ್ ಅಹ್ಮದ್ ಖಾನ್ ಸಿಲುಕಿದ್ದರು. ಹಿರಿಯ ಐಪಿಎಸ್ ಅಧಿಕಾರಿಗಳೂ ವಿಚಾರಣೆಯನ್ನು ಎದುರಿಸಿದ್ದರು.