Wednesday, January 22, 2025

ಗಂಡನಿಗೆ ಎಣ್ಣೆ ಕುಡಿಸಿ ದುಡ್ಡು ಕಿತ್ಕೊಂಡು, ಹೆಂಡತಿಗೆ ಕೊಡ್ತಿದ್ದಾರೆ : ಆರ್. ಅಶೋಕ್

ಬೆಂಗಳೂರು : ಗಂಡನಿಗೆ ಎಣ್ಣೆ ಕುಡಿಸಿ ದುಡ್ಡು ಕಿತ್ತುಕೊಂಡು, ಹೆಂಡತಿಗೆ ಕೊಡ್ತಿದ್ದಾರೆ ಅಷ್ಟೇ. 1 ರೂಪಾಯಿ ಕೊಟ್ಟು 100 ರೂಪಾಯಿ ವಾಪಸ್ ಕೀಳ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ, ಸುಪ್ರೀಂ ಕೋರ್ಟ್ ಕೂಡ ನೊಟೀಸ್​ ಕೊಟ್ಟಿದೆ. ಪಂಜಾಬ್​ಗಿಂತ ಕರ್ನಾಟಕ ಬೇಗ ಬರ್ಬಾದ್ ಆಗುತ್ತೆ, ಇದರ ಶಾಪ ಕಾಂಗ್ರೆಸ್​ಗೆ ತಟ್ಟುತ್ತೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್. ಅಶೊಕ್ ಕಿಡಿಕಾರಿದರು.

ಮದ್ಯದಂಗಡಿಗಳಿಗೆ ಲೈಸೆನ್ಸ್ ಕೊಡುವ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಕೇಳ್ತಿದ್ದಾರೆ ಫ್ರೀ ಭಾಗ್ಯ ಏನು ಬೇಡ.. ನನ್ನ ಗಂಡನಿಗೆ ಕುಡಿಸಬೇಡ ಅಂತ ಕೇಳ್ತಿದ್ದಾರೆ. ಒಂದು ಕೈಯಿಂದ ಕೊಟ್ಟು ಎರಡು ಕೈಯಿಂದ ಬಾಚಿಕೊಳ್ತಿದ್ದಾರೆ. ಈ ಸರ್ಕಾರದಲ್ಲಿ ಒಬ್ಬರು ಹೇಳಿದ್ದನ್ನ ಮತ್ತೊಬ್ಬರು ಒಪ್ಪಲ್ಲ. ಸಿಎಂ ಹೇಳಿದ್ದು ಡಿಸಿಎಂ ಒಪ್ಪಲ್ಲ, ಡಿಸಿಎಂ ಹೇಳಿದ್ದು ಸಿಎಂ ಒಪ್ಪಲ್ಲ. ಸಿದ್ದರಾಮಯ್ಯ ಹೇಳಿದ್ದು ತಪ್ಪಿರಬೇಕು, ಹಳ್ಳಿ ಹಳ್ಳಿಗೂ ಬಾರ್ ತರ್ತೀನಿ ಅಂತ ಹೇಳಿರಬೇಕು ಎಂದು ವಾಗ್ದಾಳಿ ನಡೆಸಿದರು.

100% ಇದು ಹಿಂದೂ ವಿರೋಧಿ ಸರ್ಕಾರ

ಕಾಂಗ್ರೆಸ್​ ಸರ್ಕಾರ ದಿವಾಳಿಯಾಗಿದೆ, ದುಡ್ಡಿಲ್ಲ ಅಂತ ಗೊತ್ತಾಗ್ತಿದೆ. ರೆವಿನ್ಯೂ ಡಿಪಾರ್ಟ್ಮೆಂಟ್ ನವರು ಗೈಡ್ಲೈನ್ಸ್ ವ್ಯಾಲ್ಯೂ ಜಾಸ್ತಿ ಮಾಡಿದ್ದಾರೆ. ನಾವು 5 ವರ್ಷ ಮಾಡಿರಲಿಲ್ಲ, ಕೋವಿಡ್ ಬಂದು ಜನ ಇನ್ನು ಚೇತರಿಸಿಕೊಳ್ಳುತ್ತಿದ್ದಾರೆ. ನಾನು 10% ಸ್ಟಾಂಪ್ ಕಡಿಮೆ ಮಾಡಿದ್ದೆ, ಇವರು ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿಗಳು, ಶಿವಮೊಗ್ಗದ್ದು ಸಣ್ಣ ಗಲಾಟೆ ಅಂತಾರೆ. ಈಗ ಎಲ್ಲಾ ಹೊರಗೆ ಬರ್ತಿದೆ.100% ಇದು ಹಿಂದೂ ವಿರೋಧಿ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES