Sunday, December 22, 2024

BJPಯವರು ನಕಲಿ ಹಿಂದೂಗಳು, ನಾವು ಒರಿಜಿನಲ್ ಹಿಂದೂಗಳು : ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿಯವರು ನಕಲಿ ಹಿಂದೂಗಳು ನಾವು ಒರಿಜಿನಲ್ ಹಿಂದೂಗಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರು ಹೊರವಲಯದ ದೊಮ್ಮಸಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗದಲ್ಲಿ ಗಲಾಟೆ ವಿಚಾರವಾಗಿ ಪ್ರತಿಕ್ರಿಸಿದರು. ಯಾರೇ ತಪ್ಪು ಮಾಡಿದರು ಸಹ ಕಠಿಣ ಕ್ರಮ ಆಗಬೇಕು ಈ ವಿಚಾರದಲ್ಲಿ ಪಕ್ಷ ವರ್ಗ ಸಂಘಟನೆ ಎನ್ನುವ ಮಾತೇ ಇಲ್ಲ. ಕಾಂಗ್ರೆಸ್ ಪಕ್ಷ ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ, ಅವರು ಇಲ್ಲದಿದ್ದಾಗ ಮಾಡಿರುವುದನ್ನು ನಾನು ಕೂಡ ಹೇಳಿದ್ದೇನೆ ಎಂದು ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪನವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ಕ್ಯಾಬಿನೆಟ್ ಮೀಟಿಂಗ್ ಹಾಗೂ ರಾತ್ರಿ ಮುಖ್ಯಮಂತ್ರಿಗಳ ಮನೆಯಲ್ಲಿ ಊಟಕ್ಕೆ ಕರೆದಿದ್ದರು. ಇದೇ ಸಮಯದಲ್ಲಿ ಮಲ್ಲಿಕಾರ್ಜುನ್, ಶರಣು ಪ್ರಕಾಶ್, ಲಕ್ಷ್ಮಿ ಹೆಬ್ಬಾಳ್ಕರ್ ಸಹ ಇದ್ದರು. ಈ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡುಕೊಳ್ಳಲಿ ಅಂತ ರಾತ್ರಿ ಹೇಳಿದ್ದಾರೆ ಎಂದಿದ್ದಾರೆ.

ರೌಡಿಗಳಿಗೆ ಪಕ್ಷದಲ್ಲಿ ಮಣೆ ಹಾಕುತ್ತಾರೆ

ಬಿಜೆಪಿಯವರಿಗೆ ಚುನಾವಣೆಗೆ ಯಾವುದೇ ಅಸ್ತ್ರ ಇಲ್ಲ. ಒಂದು ವರ್ಗದ ಪರವಾಗಿ ನಿಲ್ಲುವುದು ಅವರ ಜಾಯಮಾನ. ನಿಜವಾದ ಹಿಂದೂಗಳು ಕಾಂಗ್ರೆಸ್​ನವರು ಚುನಾವಣೆಗೆ ಹಾಗೂ ರಾಜಕೀಯಕ್ಕೆ ಹಿಂದುತ್ವವನ್ನು ಬಳಸಿಕೊಳ್ಳುತ್ತಾರೆ. ಬಿಜೆಪಿಯವರು ಜೊತೆಗೆ ರೌಡಿಗಳಿಗೆ ಪಕ್ಷದಲ್ಲಿ ಮಣೆ ಹಾಕುತ್ತಾರೆ. ಕೋಮುಕರ್ಷಣೆ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES