Wednesday, January 22, 2025

ರಚಿನ್.. Ra-‘Ra’hul, Chin-Sa’Chin’ : ಪೋಷಕರು ಈ ಹೆಸರು ಇಟ್ಟಿದ್ದು ಯಾಕೆ?

ಬೆಂಗಳೂರು : ಆಂಗ್ಲರ ವಿರುದ್ಧ ವಿಶ್ವಕಪ್-2023 ಉದ್ಘಾಟನಾ ಪಂದ್ಯದಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದ ಕಿವೀಸ್​ ಬ್ಯಾಟರ್ ರಚಿನ್ ರವೀಂದ್ರ ಕ್ರಿಕೆಟ್ ಅಭಿಮಾನಿಗಳ ದಿಲ್ ಕದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕೇವಲ 96 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಬೊಂಬಾಟ್ ಸಿಕ್ಸರ್​ಗಳೊಂದಿಗೆ ಅಜೇಯ 123* ಚಚ್ಚಿದ ರಚಿನ್ ರವೀಂದ್ರ ಈಗ ಭವಿಷ್ಯದ ಸೂಪರ್​ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ.

ಅಷ್ಟಕ್ಕೂ ಈ ರಚಿನ್ ಯಾರು ಗೊತ್ತಾ? ಇವರ ಪೋಷಕರು ಕರ್ನಾಟಕದವರು ಅನ್ನೋದು ಮತ್ತೊಂದು ವಿಶೇಷ. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪ ಅವರು ಬೆಂಗಳೂರಿನವರು. ಇವರು 1990ರಲ್ಲಿ ನ್ಯೂಜಿಲೆಂಡ್​ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ.

ರಚಿನ್ ಹೆಸರು ಇಟ್ಟಿದ್ದೇಕೆ?

ರಚಿನ್ ರವೀಂದ್ರ 1996ರಲ್ಲಿ ಜನಿಸಿದರು. ಅವರ ಪೋಷಕರು RAHUL DRAVID ಅವರ ಹೆಸರಿನಿಂದ ‘RA’ ಹಾಗೂ SACHIN ಅವರ ಹೆಸರಿನಿಂದ ‘CHIN’ ಅನ್ನು ಸಂಯೋಜಿಸಿ ರಚಿನ್ ಎಂದು ನಾಮಕರಣ ಮಾಡಿದ್ದಾರೆ. ಇವರು 2021ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES