Saturday, December 28, 2024

ಹಾಸನದಲ್ಲಿ ಸ್ವಾಮೀಜಿಗಳ 12 ಜೊತೆ ಪಾದುಕೆ, 28 ದಂಡ ಪತ್ತೆ

ಹಾಸನ : ಒಂದಲ್ಲ, ಎರಡಲ್ಲ ಸ್ವಾಮೀಜಿಗಳು ಬಳಸುವ 12ಕ್ಕೂ ಹೆಚ್ಚು ಜೊತೆ ಪಾದುಕೆಗಳು ಹಾಗೂ 28 ದಂದಗಳು ದಿಢೀರನೆ ಪತ್ತೆಯಾಗಿದೆ. ಇದರಿಂದ ಇಡೀ ಗ್ರಾಮಸ್ಥರೇ ಆತಂಕಕ್ಕೆ ಒಳಗಾಗಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸ್ವಾಮೀಜಿಗಳ ಪಾದುಕೆ ಹಾಗೂ ದಂಡಗಳು ಪತ್ತೆಯಾಗಿವೆ.

12 ಜೊತೆ ಪಾದುಕೆ ಮತ್ತು 28 ದಂಡಗಳು ದಿಢೀರ್ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಪಾದುಕೆ ಹಾಗೂ ದಂಡಗಳನ್ನು ವಿಶಾಲ‌ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ‌ ಜೋಡಿಸಿ ಇಡಲಾಗಿದೆ. ರಾತ್ರೋ ರಾತ್ರಿ ಸನ್ಯಾಸಿಗಳು ಬಳಸೋ ವಸ್ತುಗಳನ್ನ ತಂದಿಡಲಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

ಯಾರಾದರೂ ಸ್ವಾಮಿಗಳ ತಂಡ‌ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಯಾವುದಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೋ ಎಂಬ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES