Monday, December 23, 2024

ಭಾರಿ ಮುಖಭಂಗ..! NDAನಿಂದ ಹೊರಬಂದ ಪವನ್ ಕಲ್ಯಾಣ್?

ನವದೆಹಲಿ : ತಮಿಳುನಾಡಿನಲ್ಲಿ AIADMK ಪಕ್ಷ ಬಿಜೆಪಿ, ಎನ್​ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ಜನ ಸೇನಾ ಪಕ್ಷ ಮತ್ತೊಂದು ಶಾಕ್ ನೀಡಿದೆ.

ಸಂಕಷ್ಟದ ಸಮಯದಲ್ಲಿ ಟಿಡಿಪಿಯನ್ನು ಬೆಂಬಲಿಸಲು ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬಂದಿರುವುದಾಗಿ ನಟ ಮತ್ತು ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಹೇಳಿದ್ದಾರೆ. ಆಂಧ್ರ ಪ್ರದೇಶದ ಜನರಿಗೆ ಉತ್ತಮ ಆಡಳಿತ ಮತ್ತು ರಾಜ್ಯದ ಅಭಿವೃದ್ಧಿಗೆ ಜನಸೇನಾ ಟಿಡಿಪಿ ಮೈತ್ರಿಯ ಅಗತ್ಯವಿದೆ ಎಂದಿದ್ದಾರೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಟಿಡಿಪಿ ಬಲಿಷ್ಠ ಪಕ್ಷವಾಗಿದ್ದು, ಆಂಧ್ರಪ್ರದೇಶದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಇಂದು ಟಿಡಿಪಿ ಹೋರಾಟದಲ್ಲಿದ್ದು, ನಾವು ಅವರನ್ನು ಬೆಂಬಲಿಸಬೇಕಿದೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನಸೇನಾ ಯುವ ರಕ್ತದ ಬೆಂಬಲ ಬೇಕಿದೆ. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ ಮುಳುಗಲಿದೆ ಎಂದು ಹೇಳಿದ್ದಾರೆ.

ಕಾರಾಗೃಹದಲ್ಲಿ ಮೈತ್ರಿ ಮಾತುಕತೆ

ಕಳೆದ ಸೆಪ್ಟೆಂಬರ್ 14 ರಂದು  ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ನಾಯ್ಡು ನ್ಯಾಯಾಂಗ ಬಂಧನವಾದ ಬಳಿಕ, ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿ ನಾಯ್ಡು ಅವರನ್ನು ಪವನ್ ಕಲ್ಯಾಣ್ ಭೇಟಿ ಮಾಡಿದ್ದರು. ಅದೇ ಸಮಯದಲ್ಲಿ ಮೈತ್ರಿ ಮಾತುಕತೆ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ಹಿಂದೆ ಜುಲೈ 18ರಂದು ದೆಹಲಿಯಲ್ಲಿ ನಡೆದಿದ್ದ ಎನ್‌ಡಿಎ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೊನೆಯದಾಗಿ ಭಾಗವಹಿಸಿದ್ದರು.

ಮೋದಿ ದೃಷ್ಟಿಕೋನವನ್ನು  ಬೆಂಬಲಿಸುತ್ತೇನೆ

ಸಭೆ ಬಳಿಕ ಮಾತನಾಡಿದ್ದ ಪವನ್ ಕಲ್ಯಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು  ಜನ ಸೇನಾ ಪಕ್ಷ ಬೆಂಬಲಿಸುತ್ತದೆ ಅಂತ ಹೇಳಿದ್ದರು. ಆದ್ರೆ, ಇಂದು ಟಿಡಿಪಿ ಪಕ್ಷದ ಬಗ್ಗೆ ಒಲವು ತೋರಿರುವ ಪವನ್ ಕಲ್ಯಾಣ್, ಚಂದ್ರ ಬಾಬು ನಾಯ್ಡು ಬೆಂಬಲಕ್ಕೆ ನಿಂತಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES