Monday, December 23, 2024

ಮುಂದೆ ರೌಡಿಗಳೇ ಸಿಎಂ ಆಗ್ತಾರೆ, ಸಿದ್ದರಾಮಯ್ಯ ನೀವೆ ಕೊನೆಯ ಕೊಂಡಿ : ವಾಟಾಳ್ ನಾಗರಾಜ್

ಮಂಡ್ಯ : ಮುಂದಿನ ದಿನಗಳಲ್ಲಿ ಈ ರಾಜ್ಯ ರೌಡಿಗಳ ಕೈಗೆ ಹೋಗುತ್ತೆ. ರೌಡಿಗಳು ಚುನಾವಣೆಗೆ ನಿಲ್ತಾರೆ, ಅವರ ಗುರುತು ಲಾಂಗ್ ಗುರುತು. ರೌಡಿಗಳೇ ಮುಖ್ಯಮಂತ್ರಿಗಳು ಆಗ್ತಾರೆ. ಅಧಿಕಾರಿಗಳನ್ನ ಬಳಕೆ ಮಾಡಿಕೊಂಡು ಅಟ್ಟಹಾಸ ನಡೆಸುತ್ತಾರೆ ಎಂದು ಡಿಕೆಶಿ ಹೆಸರೇಳದೆ ಕನ್ನಡ ಪರ ಹೋರಾಟಗಾರ ವಾಟಾಳ್​​​ ನಾಗರಾಜ್​​ ಕಿಡಿಕಾರಿದರು.

ಮಂಡ್ಯದಲ್ಲಿ ಮಾತನಾಡಿರುವ ಅವರು, 20 ವರ್ಷದ ಹಿಂದೆಯೇ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೆ. ಕರ್ನಾಟಕ ಉಳಿಸಿ ರೈತರಿಗೆ ಬೆಂಬಲ ಕೊಡಿ ಅಂತ. ನಾನು ರೈತರಿಗೆ ಬೆಂಬಲ ಕೊಡ್ತೇನೆ. ಕಾವೇರಿ ಅಂತ್ಯ ಹೋರಾಟ ನಡೆಯಲೇ ಬೇಕು. ನೀರು ಇದ್ರೆ ಇಟ್ಟುಕೊಳ್ಳಕ್ಕಾಗಲ್ಲ ನೀರು ಬಿಡಲೇಬೇಕು ಎಂದರು.

ಸಿದ್ದರಾಮಯ್ಯ ಅವರೇ, ಇಂತಹ ಸಂದರ್ಭ ನಿಮ್ಮ ಜೀವನದಲ್ಲಿ ಸಿಗಲ್ಲ. ಯಾರ ಮಾತನ್ನು ಕೇಳದೆ ನೀರು ಬಿಡಲ್ಲ ಅಂತ ಹೇಳಿ. ಅಧಿಕಾರ ಹೋಗುತ್ತಾ ಹೋಗ್ಲಿ, ಮುಖ್ಯಮಂತ್ರಿ ಸ್ಥಾನದಿಂದ ನಿಮ್ಮನ್ನ ತೆಗೆಯಲು ಸಾಧ್ಯವಿಲ್ಲ. ರಾಜ್ಯಪಾಲ ಆಳ್ವಿಕೆ ತರುತ್ತಾರಾ ತರಲಿ. ಸರ್ಕಾರ ತೆಗೆದು ನೀರು ಬಿಡ್ತಾರೆ ಅದು ಹಾಗಲ್ಲ. ನಿಮಗೆ ಅಧ್ಭುತ ಚಿಂತನೆ ಇದೆ, ನೀವೆ ಕೊನೆಯ ಕೊಂಡಿ ಎಂದು ಸಲಹೆ ನೀಡಿದರು.

ಇವಾಗ ಬರೀ ಭ್ರಷ್ಟಾಚಾರ ತುಂಬಿದೆ

ಮಂಡ್ಯದ ರೈತರು ಪ್ರಾಮಾಣಿಕವಾಗಿ ಕಾವೇರಿಗಾಗಿ ನಿರಂತರವಾಗಿ ಹೋರಾಟ ಮಾಡ್ತಿದ್ದಾರೆ. ಹಿಂದಿನ ರಾಜಕಾರಣಿಗಳು ಪ್ರಾಮಾಣಿಕವಾಗಿ ಇದ್ದರು. ಇವಾಗ ಬರೀ ಭ್ರಷ್ಟಾಚಾರ ತುಂಬಿದೆ. ರೈತರು ಏನೇ ಹೋರಾಟ ಮಾಡಿದ್ರು ನಮ್ಮ ಬೆಂಬಲ ಇದೆ. ನಿಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟು ಕರ್ನಾಟಕದ ಬಂದ್ ಮಾಡಲಾಗಿತ್ತು. ಕಾವೇರಿ ನಮಗೆ ಸಂಬಂಧ ಇಲ್ಲ ಅನ್ನಬಾರದು. ನಾವೆಲ್ಲ ಒಂದೇ ರೀತಿಯ ಹೋರಾಟ ಮಾಡಬೇಕು. ಸರ್ಕಾರ ನೀರು ಬೀಡುತಲ್ಲೆ ಇದೆ, ನೀರು ನಿಲ್ಲಿಸಿಲ್ಲ. ಯಾರು ಏನೆ ಮಾಡ್ಕೋತ್ತಾರೆ ಅಂತ ಬರಿ ಕಥೆ ಬಿಡ್ತಾರೆ. ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES