Wednesday, January 22, 2025

ಇತಿಹಾಸ ಸೃಷ್ಟಿ..! ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕಿವೀಸ್​ಗೆ ಭರ್ಜರಿ ಜಯ

ಬೆಂಗಳೂರು : ವಿಶ್ವಕಪ್‌-2023ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ಆಂಗ್ಲರ ವಿರುದ್ಧ ಕಿವೀಸ್​ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಈ ಜಯದೊಂದಿಗೆ ನ್ಯೂಜಿಲೆಂಡ್ 2019ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡಿತು. ಆರಂಭಿಕ ಆಟಗಾರ ಡೆವೊನ್ ಕಾನ್ವೆ ಅಜೇಯ 152* ಹಾಗೂ ಬೆಂಗಳೂರು ಮೂಲದ ಕಿವೀಸ್ ಆಲೌಂಡರ್ ರಚಿನ್ ರವೀಂದ್ರ ಅಜೇಯ 123* ಅವರ 273 ರನ್‌ಗಳ ಜತೆಯಾಟದ ನೆರವಿನಿಂದ ಕಿವೀಸ್ 36.2 ಓವರ್ ಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ 9 ವಿಕೆಟ್ ಗಳ ದೊಡ್ಡ ಗೆಲುವು ಸಾಧಿಸಿತು. ಸ್ಯಾಮ್ ಕರನ್ ಒಂದು ವಿಕೆಟ್ ಪಡೆದರು.

ಇನ್ನೂ, ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್​ ಕಲೆ ಹಾಕಿತು. ಇಂಗ್ಲೆಂಡ್​ ಪರ ಜೋ ರೂಟ್​ 77, ನಾಯಕ ಬಟ್ಲರ್ 43, ಬೈರ್ಸ್ಟೋವ್​ 33, ಬ್ರೂಕ್​ 25 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 3, ಗ್ಲೆನ್ ಫಿಲಿಪ್ಸ್​ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಪಡೆದರೆ, ಟ್ರೆಂಟ್​ ಬೌಲ್ಟ್​ ಹಾಗೂ ರವೀಂದ್ರ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಮೊದಲ ಪಂದ್ಯ ದಾಖಲೆಗಳು

ಈ ಬಾರಿಯ ವಿಶ್ವಕಪ್-2023r ಮೊದಲ ಶತಕವನ್ನು ಡೆವೊನ್ ಕಾನ್ವೆ, ಎರಡನೇ ಶತಕವನ್ನು ರಚಿನ್ ರವೀಂದ್ರ ದಾಖಲಿಸಿದರು. ಕಾನ್ವೆ ಮತ್ತು ರಚಿನ್ ರವೀಂದ್ರ ಅವರ 214 ಎಸೆತಗಳಲ್ಲಿ ಅಜೇಯ 273*rನ್​ಗಳ ಜೊತೆಯಾಟವು ODI ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್‌ಗೆ ಇದುವರೆಗಿನ ಅತಿದೊಡ್ಡ ಜೊತೆಯಾಟವಾಗಿದೆ.

ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ರಚಿನ್ ರವೀಂದ್ರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕಾನ್ವೆ ಮತ್ತು ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ಪರ ಏಕದಿನ ವಿಶ್ವಕಪ್‌ನಲ್ಲಿ ದ್ವಿಶತಕದ ಜೊತೆಯಾಟವನ್ನು ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

RELATED ARTICLES

Related Articles

TRENDING ARTICLES