Monday, December 23, 2024

ಚಾಲಕನ ಎಡವಟ್ಟು.. ಸಿಗ್ನಲ್ ಜಂಪ್ ಮಾಡಿ ಬೈಕ್​, ಕಾರಿಗೆ ಡಿಕ್ಕಿ ಹೊಡೆದ ಕಿಲ್ಲರ್ ಬಸ್

ಕೊಲ್ಕತ್ತಾ : ಬಸ್​ ಚಾಲಕನ ಆತುರ ಹಾಗೂ ಮಹಾ ಎಡವಟ್ಟಿನಿಂದ ದೊಡ್ಡ ಅನಾಹುತವೊಂದು ಸಂಭವಿಸಿದೆ. ಸಿಗ್ನಲ್​ ಜಂಪ್​ ಮಾಡಿ ಕಾರು​ ಮತ್ತು ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ ಹೊಡೆದಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ಕಾಲೇಜ್​ ಬಳಿಯ ಡಿವೈಡರ್​​ಗೆ ಬಸ್​ ಡಿಕ್ಕಿ ಹೊಡೆದುದರಿಂದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ದ್ವಿಚಕ್ರವಾಹನದ ಸವಾರ ಮತ್ತು ಹಿಂಬದಿಯ ಸವಾರ ಹೆಲ್ಮೆಟ್​ ಧರಿಸಿದ್ದರಿಂದ ಅವರು ಯಾವುದೇ ರೀತಿಯ ಗಾಯಗಳಿಗೆ ಒಳಗಾಗಿಲ್ಲ. ಅದೃಷ್ಟವಶಾತ್​ ಕಾರಿನಲ್ಲಿದ್ದವರು ಗಾಯಗೊಳ್ಳದೆ ಪಾರಾಗಿದ್ದಾರೆ. ಕಾರಿನ ಏರ್​ಬ್ಯಾಗ್​ ಅವರನ್ನು ರಕ್ಷಿಸಿದೆ.

KB 16 ಮಾರ್ಗದ ಬಸ್, ಸುಖೋಬ್ರಿಷ್ಟಿ ವಸತಿ ಸಂಕೀರ್ಣದ ಬಳಿಯ ಬಸ್ ಟರ್ಮಿನಸ್‌ನಿಂದ ವಿಐಪಿ ರಸ್ತೆಯಿಂದ ಬಂಗೂರ್ ಅವೆನ್ಯೂಗೆ ಚಲಿಸುವಾಗ ಈ ದುರ್ಘಟನೆ ನಡೆದಿದೆ. ಸಿಗ್ನಲ್​ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೂಡ ಚಾಲಕ ಬಸ್ ನಿಲ್ಲಿಸಲಿಲ್ಲ. ಪರಿಣಾಮವಾಗಿ ನಾಲ್ಕು ಪಾಯಿಂಟ್ ಕ್ರಾಸಿಂಗ್‌ನ ನಂತರ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಡ್ರೈವರ್​ ಮೇಲೆ ಯಾವೆಲ್ಲ ಕೇಸ್​ ದಾಖಲು?

ಗಾಯಗೊಂಡ 10 ಪ್ರಯಾಣಿಕರನ್ನು ಬಿಧಾನನಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹೆಚ್ಚಿನವರು ಮೂಗೇಟಿಗೆ ಒಳಗಾಗಿದ್ದಾರೆ. ಕೆಲವರ ಕೈಕಾಲು, ಮೂಳೆಗಳು ಮುರಿದಿವೆ. ಈ ದುರ್ಘಟನೆಗೆ ಕಾರಣನಾದ ಬಸ್ಸಿನ ಚಾಲಕನನ್ನು ಬಂಧಿಸಲಾಗಿದ್ದು, ವೇಗದ ಚಾಲನೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

4 wheeler jumped signal and rammed into the bus.
byu/Construction1ne inCarsIndia

RELATED ARTICLES

Related Articles

TRENDING ARTICLES