Sunday, December 22, 2024

ಯಡಿಯೂರಪ್ಪ, ನಾನು ಹೇಳುವವರೆಗೂ ಏನೂ ಮಾಡಬೇಡಿ ಅಂತ ಹೇಳಿದ್ದಾರೆ : ಎಸ್.ಟಿ ಸೋಮಶೇಖರ್

ಬೆಂಗಳೂರು : ಕಾಂಗ್ರೆಸ್​ ಪಕ್ಷಕ್ಕೆ ಯಾರು ಯಾರು ಹೋಗುತ್ತಾರೆ ಎಂಬ ಪ್ರಶ್ನೆಗೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಹೋಗಿರುವವರು ಕಾಂಗ್ರೆಸ್ ಟಿಕೆಟ್‌ಗೆ, ಮತ್ತೊಂದಕ್ಕೆ ಅನುಕೂಲ ಆಗಲಿ ಅಂತ ಹೋಗಿದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹೈಕಮಾಂಡ್ ಅದ್ರೆ ನಮಗೆ ಯಡಿಯೂರಪ್ಪ. ಯಡಿಯೂರಪ್ಪ ನಾನು ಹೇಳುವವರೆಗೂ ಏನೂ ಮಾಡಬೇಡಿ ಅಂತ ಹೇಳಿದ್ದಾರೆ. ಅದಕ್ಕೆ ನಾನೆಲ್ಲೂ ಒಂದು ತಿಂಗಳಿಂದ ಏನು ಮಾತನಾಡಿಲ್ಲ. ಅವರು ಏನೋ ಹೇಳಿದ್ದಾರೆ, ಹಾಗಾಗಿ ಅಲ್ಲಿಯವರೆಗೂ ಮಾತನಾಡಲ್ಲ. ಯಾವುದೂ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಹೇಳಿದ್ದಾರೆ.

ಪೇಪರಲ್ಲಿ ಬಂದಂಗೆ ಸಮ್ಮಿಶ್ರ ಆಗಲಿದೆ ಅಂದ್ರೆ ವಯಕ್ತಿಕವಾಗಿ ಸಹಮತ ಇಲ್ಲ. ಭಯ ಪಡುವ ಅವಶ್ಯಕತೆ ಏನಿಲ್ಲ. ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಆಗಿದೆ. ಜೆಡಿಎಸ್ ಹಾಗೂಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಗಿತ್ತು. ಹೊರಗಡೆ ಬಂದ ಉದ್ದೇಶ ಏನು? ಎಂಪಿ ಚುನಾವಣೆಗೆ ಮೈತ್ರಿ ಆದ ಉದ್ದೇಶ ಏನು? ರಾಹುಲ್ ಗಾಂಧಿ ಮತ್ತು ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಮಾಡಿದ್ರು ಎಂದು ತಿಳಿಸಿದ್ದಾರೆ.

ನಾವು ನಾವು ಒಂದಾಗಬಹುದು. ಆದ್ರೆ, ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ. ನಾವು ಲೀಡರ್‌ಗಳನ್ನ, ಕಾರ್ಯಕರ್ತರನ್ನ ಎದುರಿಗೆ ಹಾಕಿಕೊಳ್ಳಲು ಆಗಲ್ಲ. ಅವರ ವಿರೋಧ ಕಟ್ಟಿಕೊಂಡು ರಾಜಕಾರಣದಲ್ಲಿ ಎಂಎಲ್‌ಎ ಆಗಲು ಆಗಲ್ಲ. ಅವರಿಗೆ ಏನು ಗೌರವ ಕೊಡಬೇಕು, ಕೊಡ್ತಿದ್ದೇವೆ ಎಂದು ಎಸ್​.ಟಿ. ಸೋಮಶೇಖರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES