Sunday, January 19, 2025

ಬಂಟ್ವಾಳದಲ್ಲಿ ಬೃಹತ್ ಕಾಳಿಂಗ ಸೆರೆ!

ಮಂಗಳೂರು :  ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತಿದ್ದ ಬೃಹತ್ ಕಾಳಿಂಗ ಇದೀಗ ಮಂಗಳೂರಿನ ಬಂಟ್ವಾಳದಲ್ಲಿ ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಭೀತಿ ಹುಟ್ಟಿಸಿದ್ದ ಕಾಳಿಂಗ ಇದೀಗ ಸೆರೆಯಾಗಿದೆ. 12 ಅಡಿ ಉದ್ದದ ಕಾಳಿಂಗವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಮಂಡ್ಯ ಜಿಲ್ಲೆ, ಕಾವೇರಿ ಅಚ್ಚುಕಟ್ಟಿಗೆ HDK ಕೊಡುಗೆ ಏನು?: ಸಚಿವ ಚೆಲುವರಾಯಸ್ವಾಮಿ ಪ್ರಶ್ನೆ!

ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಳಿಂಗ ಸರ್ಪವನ್ನು ತುಳಿದು ಅಪಾಯದಿಂದ ಪಾರಾಗಿದ್ದರು. ಅರಣ್ಯ ಇಲಾಖೆಯ ಸಹಕಾರದಿಂದ ಕಾಳಿಂಗನ ಸೆರೆಹಿಡಿದು ಅರಣ್ಯಕ್ಕೆ ರವಾನೆ ಮಾಡಲಾಯಿತು. ಕಾಳಿಂಗ ಎರಡು ತಿಂಗಳಿನಿಂದ ಪಂಜಿಕಲ್ಲು ಆಸುಪಾಸಿನಲ್ಲಿ ಜನರ ನಿದ್ದೆಗೆಡಿಸಿತ್ತು ಎನ್ನಲಾಗಿದೆ.

RELATED ARTICLES

Related Articles

TRENDING ARTICLES