ಮಂಡ್ಯ : ಕಾವೇರಿಗಾಗಿ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ರೈತರಗಾಗಿ ನಾವು ಬೆಂಬಲ ನೀಡಿ ಅವರ ಪರ ನಿಲ್ತೇವೆ ಎಂದು ತಿಳಿಸಿದ್ದಾರೆ.
ರಾಜಕೀಯದವರ ಬಗ್ಗೆ ಮಾತನಾಡಲ್ಲ, ರೈತರಿಗೆ ಅನ್ಯಾಯ ಆಗಬಾರದು. ಬೆಂಗಳೂರಿಗರಿಗೆ ಕುಡಿಯುವ ನೀರು ಇಲ್ಲ. ಅವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಬೇಕು. ಇನ್ನು 15 ದಿನ ಕಳೆದರೆ ನೀರಿನ ಹಾಹಾಕಾರ ಶುರುವಾಗುತ್ತೆ. ನಮ್ಮ ಪರಿಸ್ಥಿತಿಯನ್ನ ರಾಜ್ಯ ಸರ್ಕಾರ ನೋಡಬೇಕು. ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಸಂಪೂರ್ಣ ಬೆಂಬಲವನ್ನು ಕೊಡುತ್ತೇವೆ. ತಕ್ಷಣವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ನಿಲ್ಲಸಲಿ ಎಂದು ಆಗ್ರಹಿಸಿದ್ದಾರೆ.
ಮೋದಿ ಮಧ್ಯೆ ಪ್ರವೇಶಿಸಲಿ
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯೆ ಪ್ರವೇಶಿಸಿ ಎರಡೂ ರಾಜ್ಯದ ಸಿಎಂ ಕರೆದು ಸಮಸ್ಯೆ ಬಗೆಹರಿಸಬೇಕು. ಸಂಸದರು ಯಾರು ನೀರಿನ ಕಷ್ಟ ಅರ್ಥಮಾಡಿಕೊಂಡಿಲ್ಲ. ಧ್ವನಿ ಎತ್ತುವ ಕೆಲಸ ಮಾಡಿ, ರಾಜ್ಯದಲ್ಲಿ ಎಲ್ಲಾ ರಾಜ್ಯದ ಜನರು ಇದ್ದಾರೆ. ಅವರಿಗೂ ಕುಡಿಯುವ ನೀರು ಬೇಕು ಎಂದು ಕೆಂಪಣ್ಣ ಹೇಳಿದ್ದಾರೆ.