ಬೆಂಗಳೂರು : ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ಶ್ರೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಈ ಬಾರಿಯ ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15 ರಿಂದ 23ರವರೆಗೆ ವೈಭವವಾಗಿ ನಡೆಯಲಿದೆ.
ಚಂದ್ರಮಾನದ ಪ್ರಕಾರ, ಈ ಬಾರಿ ಅಧಿಕಮಾಸ ಬಂದಿರುವುದರಿಂದ ಎರಡು ಬಾರಿ ಬ್ರಹ್ಮೋತ್ಸವಗಳು ನಡೆಯುತ್ತವೆ. ಹೀಗೆ ಬಂದ ಸಂದರ್ಭಗಳಲ್ಲಿ ಕನ್ಯಾಮಾಸ ಭಾದ್ರಪದಲ್ಲಿ ವಾರ್ಷಿಕ ಬ್ರಹ್ಮೋತ್ಸವಗಳು, ಆಶ್ವಯುಜಂಗಳಲ್ಲಿ ದಸರಾ ನವರಾತ್ರಿಗಳಲ್ಲಿ ನವರಾತ್ರಿ ಬ್ರಹ್ಮೋತ್ಸವಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ.
ಇದರ ಅಂಗವಾಗಿ ನಡೆಯುವ ನವರಾತ್ರಿ ಬ್ರಹ್ಮೋತ್ಸವದಲ್ಲಿ ಧ್ವಜಾರೋಹಣ ನಡೆಯಲಿರುವ ಅಕ್ಟೋಬರ್ 19ರಂದು ಗರುಡ ವಾಹನ, 20ರಂದು ಪುಷ್ಪಕವಿಮಾನಂ, ಅಕ್ಟೋಬರ್ 22ರಂದು ಸ್ವರ್ಣರಥ, 23ರಂದು ಚಕ್ರಸ್ನಾನ ನಡೆಯಲಿದೆ. ಬೆಳಗ್ಗೆ ವಾಹನ ಸೇವೆ 8 ರಿಂದ 10 ಗಂಟೆಗಳವರೆಗೆ, ರಾತ್ರಿ ವಾಹನ ಸೇವೆ 7 ರಿಂದ 9 ಗಂಟೆಯವರೆಗೆ ನಡೆಯುತ್ತದೆ.
ಗರುಡವಾಹನ ಸೇವೆ ರಾತ್ರಿ 7 ರಿಂದ 12 ಗಂಟೆಗಳವರೆಗೆ ನಡೆಯುತ್ತದೆ. ಈ ಬ್ರಹ್ಮೋತ್ಸವದಲ್ಲಿ ವಾಹನ ಸೇವೆ ವೈಶಿಷ್ಟ್ಯ ಹೀಗೆ ಇರಲಿದೆ. ನವರಾತ್ರಿ ಬ್ರಹ್ಮೋತ್ಸವಗಳಿಗೆ 14 ರಂದು ರಾತ್ರಿ 7 ಗಂಟೆಯಿಂದ 9 ಗಂಟೆಗಳವರೆಗೆ ಅಂಕುರಾರ್ಪಣ ನಡೆಯಲಿದೆ.