Wednesday, January 22, 2025

ವಿಜಯ ‘ಚಂಡಿಕಾ ಯಾಗ’ : ಯಾಕೆ ಮಾಡಬೇಕು? ಏನಿದರ ಮಹತ್ವ?

ಬೆಂಗಳೂರು : ಲೋಕ ಕಲ್ಯಾಣಾರ್ಥವಾಗಿ ಸಿದ್ಧಲಿಂಗೇಶ್ವರ ಗದ್ದುಗೆ ಮಠದಲ್ಲಿ 10 ದಿನಗಳ ಕಾಲ ಪೂಜೆ ಹಾಗೂ ವಿಜಯ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ  ಕುರಿತು ಪವರ್ ಟಿವಿಗೆ ಮಾಹಿತಿ ನೀಡಿರುವ ಅವರು, ಸದ್ಭಕ್ತರ ಕಲ್ಯಾಣಕ್ಕಾಗಿ, ಸಮಸ್ತ ಮನುಕುಲದ ಒಳಿತಿಗಾಗಿ ಶರನ್ನವರಾತ್ರಿಯ 10 ದಿನಗಳೂ ಅಂದರೆ ಅಕ್ಟೋಬರ್ 15ರಿಂದ ಅಕ್ಟೋಬರ್ 24ರವರೆಗೆ ಶ್ರೀ ಪೀಠದಲ್ಲಿ ವಿಶೇಷ ಪೂಜೆ, ಹವನ, ಹೋಮಾದಿಗಳು ನೆರವೇರಲಿದೆ ಎಂದು ತಿಳಿಸಿದ್ದಾರೆ.

ಶ್ರೀಮಠದಲ್ಲಿ ಭಕ್ತರೇ ಭಕ್ತಿಯಿಂದ ಆಚರಿಸುತ್ತಾ ಬರುತ್ತಿರುವ ವಿಜಯದಶಮಿ ಹಬ್ಬವನ್ನು ಈ ವರ್ಷವೂ ಸಹಾ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುವುದು. ದೈವಪ್ರೇರಣೆಯಂತೆ ಅಕ್ಟೋಬರ್ 24ರಂದು ಮಂಗಳವಾರ ವಿಜಯ ಚಂಡಿಕಾ ಯಾಗ ನೆರವೇರಲಿದೆ ಎಂದು ಹೇಳಿದ್ದಾರೆ.

ಹಣಕಾಸಿನ ಸಮಸ್ಯೆಗಳು, ಕೋರ್ಟ್ ವಿಚಾರಗಳು, ಸಂತಾನ ಪ್ರಾಪ್ತಿ, ವೈವಾಹಿಕ ತೊಂದರೆಗಳು, ವಿವಾಹದಲ್ಲಿ ಅಡೆ ತಡೆಗಳು, ಆರೋಗ್ಯ ಸಮಸ್ಯೆಗಳು, ದುಷ್ಟಶಕ್ತಿಗಳಿಂದ ಆಗುತ್ತಿರುವ ತೊಂದರೆಗಳು, ಮಾನಸಿಕ ಖಿನ್ನತೆ, ಉದ್ಯೋಗದಲ್ಲಿ ತೊಂದರೆಗಳು, ಭೂಮಿ ವ್ಯಾಪಾರದಲ್ಲಿ ತೊಂದರೆ ಇರುವವರು, ಕೈಗಾರಿಕೆಯಲ್ಲಿ ತೊಂದರೆಯನ್ನು ಅನುಭವಿಸುತ್ತ ಇರುವವರು, ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರುವವರು ಭಾಗವಹಿಸಬಹುದು ಎಂದಿದ್ದಾರೆ.

ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ

ಅಲ್ಲದೆ, ನಷ್ಟದಲ್ಲಿರುವ ರೈತರುಗಳು, ಕಲಾಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿರುವವರು, ವಿದ್ಯಾಭ್ಯಾಸದಲ್ಲಿ ಕುಂಠಿತ ಹೀಗೆ ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವವರು ಈ ದಸರಾ ಹಬ್ಬದ 10 ದಿನದಲ್ಲಿಯೂ ಶ್ರೀಮಠದಲ್ಲಿ ನಡೆಯುವ ಇಷ್ಟಕಾಮೇಶ್ವರಿಯವರ ಹಾಗೂ ಇತರ ದೇವತೆಗಳ ಪೂಜೆಯಲ್ಲಿ ಸೇವೆಯನ್ನು ಕೈಗೊಂಡು ದೇವತೆಗಳ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES